ಅಲಿಗಢ: ವಿಧಿವಿಜ್ಞಾನ ತರಗತಿಯಲ್ಲಿ ಹಿಂದೂ ಪುರಾಣಗಳಲ್ಲಿನ ಅತ್ಯಾಚಾರದ ಉದಾಹರಣೆಗಳನ್ನು ಉಲ್ಲೇಖಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಾಧ್ಯಾಪಕರನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಅಮಾನತುಗೊಳಿಸಿದೆ.
ಎಎಂಯು ಅಧಿಕಾರಿಗಳ ಪ್ರಕಾರ, ಎಎಮ್ ಯುನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿತೇಂದ್ರ ಕುಮಾರ್ ಅವರು ವೈದ್ಯಕೀಯ ನ್ಯಾಯಶಾಸ್ತ್ರದ ಕುರಿತು ತರಗತಿಯನ್ನು ನಡೆಸುವಾಗ ಪುರಾಣದಲ್ಲಿ “ಅತ್ಯಾಚಾರ” ದ ಅಂಶಗಳನ್ನು ಉಲ್ಲೇಳಿಸುಇದ ಬಗ್ಗೆ ಆರೋಪ ಎದುರಿಸುತ್ತಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಡಾ.ಜಿತೇಂದ್ರ ಕುಮಾರ್ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು 24 ಗಂಟೆಯೊಳಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ಸಹ ರಚಿಸಿದ್ದಾರೆ, ಆದರೆ ವಿಚಾರಣೆಯ ಭಾಗವಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಟಿಸ್ ಬಂದ ನಂತರ ಪ್ರಾಧ್ಯಾಪಕರು ಕ್ಷಮೆಯಾಚಿಸಿ ಎಎಂಯು ಉಪಕುಲಪತಿ ತಾರಿಕ್ ಮನ್ಸೂರ್ ಅವರಿಗೆ ಬುಧವಾರ ಪತ್ರ ಬರೆದಿರುವ ಪ್ರೊ.ಕುಮಾರ್,ಯಾವುದೇ ನಿರ್ದಿಷ್ಟ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ ಮತ್ತು ಹಲವು ವರ್ಷಗಳಿಂದ ಅತ್ಯಾಚಾರ ನಮ್ಮ ಸಮಾಜ ಬಾಧಿಸುತ್ತಿದೆ ಎಂಬುದನ್ನು ಎತ್ತಿ ತೋರಿಸಲು ಉಲ್ಲೇಖಿಸಲಾಗಿತ್ತು ಎಂದು ಹೇಳಿದ್ದಾರೆ. ಇದು ಅಚಾತುರ್ಯದಿಂದ ಮಾಡಿದ ತಪ್ಪಾಗಿದೆ ಎಂದ ಅವರು, ಭವಿಷ್ಯದಲ್ಲಿ ಇಂತಹ ಘಟನೆ ನಡೆಯುವುದಿಲ್ಲ ಎಂದು ಭರವಸೆ ನೀಡಿದರು.
ಉಪನ್ಯಾಸದ ವಿಡಿಯೋ ತುಣುಕನ್ನು ಯಾರೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ವೈದ್ಯಕೀಯ ವಿಭಾಗದ ಡೀನ್ ಪ್ರೊ.ರಾಕೇಶ್ ಭಾರ್ಗವ ಅವರ ಶಿಫಾರಸಿನ ಮೇರೆಗೆ ಎಎಂಯು ಅಧಿಕಾರಿಗಳು ಆರಂಭದಲ್ಲಿ ಶೋಕಾಸ್ ನೋಟಿಸ್ ನೀಡಿದ್ದರು.