ಕೊಲೊಂಬೊ: ದೇಶದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಸುಸ್ಥಿತಿಗೆ ತರಲು ವಿಫಲರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಅವರ ಪ್ರಬಲ ಕುಟುಂಬವನ್ನು ತೊರೆಯುವಂತೆ ಪ್ರತಿಭಟನಾಕಾರರು ಕರೆ ನೀಡುವುದನ್ನು ಮುಂದುವರೆಸಿದ್ದರಿಂದ ಸಂವಿಧಾನವನ್ನು ಅಧ್ಯಕ್ಷೀಯ ಅಧಿಕಾರದಿಂದ ಕ್ಷಿಪ್ರವಾಗಿ ತೊರೆದು ಸಂಸತ್ತಿಗೆ ಅಧಿಕಾರ ನೀಡಲಾಗುವುದು ಎಂದು ಶ್ರೀಲಂಕಾ ಪ್ರಧಾನ ಮಂತ್ರಿ ತಿಳಿಸಿದ್ದಾರೆ.
ಅಧಿಕಾರ ವರ್ಗಾವಣೆಯು ದೇಶವನ್ನು ರಾಜಕೀಯವಾಗಿ ಸ್ಥಿರಗೊಳಿಸಲು ತೆಗೆದುಕೊಳ್ಳಬಹುದಾದ ತ್ವರಿತ ಕ್ರಮಗಳಲ್ಲಿ ಒಂದಾಗಿದೆ. ಆರ್ಥಿಕ ಚೇತರಿಕೆಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾತುಕತೆಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮಹಿಂದ ರಾಜಪಕ್ಸ ಸಂಸತ್ತು ಉದ್ದೇಶಿಸಿ ಹೇಳಿದರು.
ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಹೊಂದುವುದು ಮುಖ್ಯವಾಗಿದೆ ಎಂದು ರಾಜಪಕ್ಸೆ ಹೇಳಿದರು. ಸಂಸತ್ತಿಗೆ ಹೆಚ್ಚಿನ ಅಧಿಕಾರದೊಂದಿಗೆ ಸಾಂವಿಧಾನಿಕ ಸ್ಥಾನಮಾನಕ್ಕೆ ಮರಳುವುದು ಸುಧಾರಣೆಗಳಿಗೆ ಮೊದಲ ಹೆಜ್ಜೆಯಾಗಿದೆ ಎಂದರು.
ಪ್ರಧಾನಿ ಮಹಿಂದ ರಾಜಪಕ್ಸ ಅವರ ಸಹೋದರರಾಗಿರುವ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು 2019 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಮೇಲೆ ಅಧ್ಯಕ್ಷೀಯ ಅಧಿಕಾರದಲ್ಲಿ ಹೆಚ್ಚಿನ ಅಧಿಕಾರವನ್ನು ಕೇಂದ್ರೀಕರಿಸಿದರು. ಆರ್ಥಿಕ ಬಿಕ್ಕಟ್ಟಿಗೆ ಅವರನ್ನು ಹೊಣೆಗಾರರನ್ನಾಗಿಸಿ ಸಾವಿರಾರು ಪ್ರತಿಭಟನಾಕಾರರು ಇಂದು ಮಂಗಳವಾರ 11ನೇ ದಿನವೂ ಅಧ್ಯಕ್ಷರ ಕಚೇರಿಯ ಪ್ರವೇಶ ದ್ವಾರ ಆಕ್ರಮಿಸಿಕೊಂಡಿದ್ದರು.
ದ್ವೀಪರಾಷ್ಟ್ರ ಶ್ರೀಲಂಕಾ ದಿವಾಳಿತನದ ಅಂಚಿನಲ್ಲಿದೆ, ಸುಮಾರು 25 ಬಿಲಿಯನ್ ಡಾಲರ್ ವಿದೇಶಿ ಸಾಲದಲ್ಲಿ ಸುಮಾರು 7 ಬಿಲಿಯನ್ ಡಾಲರ್ ಈ ವರ್ಷ ಮರುಪಾವತಿಗೆ ಬಾಕಿಯಿದೆ. ವಿದೇಶಿ ವಿನಿಮಯದ ತೀವ್ರ ಕೊರತೆ ಎಂದರೆ ಆಮದು ಮಾಡಿದ ವಸ್ತುಗಳನ್ನು ಖರೀದಿಸಲು ದೇಶಕ್ಕೆ ಹಣದ ಕೊರತೆಯಿದೆ.
ಶ್ರೀಲಂಕನ್ನರು ಆಹಾರ, ಅಡುಗೆ ಅನಿಲ, ಇಂಧನ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆಯನ್ನು ತಿಂಗಳುಗಟ್ಟಲೆಯಿಂದ ಎದುರಿಸುತ್ತಿದ್ದಾರೆ. ಲಭ್ಯವಿರುವ ಅತ್ಯಂತ ಸೀಮಿತ ದಾಸ್ತಾನುಗಳನ್ನು ಖರೀದಿಸಲು ಗಂಟೆಗಟ್ಟಲೆ ಸಾಲುನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ.
ಕಳೆದ ವಾರ, IMF ನೊಂದಿಗೆ ಮಾತುಕತೆ ನಡೆಸಿ ಬಾಕಿ ಉಳಿದಿರುವ ವಿದೇಶಿ ಸಾಲಗಳ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಹೇಳಿದೆ. ಹಣಕಾಸು ಸಚಿವ ಅಲಿ ಸಬ್ರಿ ಮತ್ತು ಅಧಿಕಾರಿಗಳು ಭಾನುವಾರ Iಒಈ ನೊಂದಿಗೆ ಮಾತುಕತೆಗೆ ತೆರಳಿದ್ದರು. IMF ಮತ್ತು ವಿಶ್ವ ಬ್ಯಾಂಕ್ ಈ ವಾರ ವಾಷಿಂಗ್ಟನ್‌ನಲ್ಲಿ ವಾರ್ಷಿಕ ಸಭೆಗಳನ್ನು ನಡೆಸುತ್ತಿವೆ. ಆಹಾರ ಮತ್ತು ಇಂಧನವನ್ನು ಖರೀದಿಸಲು ತುರ್ತು ಸಾಲಕ್ಕಾಗಿ ಶ್ರೀಲಂಕಾ ಚೀನಾ ಮತ್ತು ಭಾರತದತ್ತ ಮುಖ ಮಾಡಿದೆ.