HEALTH TIPS

ಎರಡು ವರ್ಷಗಳ ನಂತರ ಅಗರ್ತಲಾ -ಢಾಕಾ-ಕೋಲ್ಕತ್ತಾ ಬಸ್‌ ಸೇವೆ ಪುನರಾರಂಭ

            ಅಗರ್ತಲಾಢಾಕಾ ಮೂಲಕ ಸಂಚಾರ ಕೈಗೊಳ್ಳಲಿರುವ ಅಗರ್ತಲಾ-ಕೋಲ್ಕತ್ತಾ ಬಸ್‌ ಸೇವೆಯು ಎರಡು ವರ್ಷಗಳ ನಂತರ ಮಂಗಳವಾರದಿಂದ ಪುನರಾರಂಭಗೊಂಡಿದೆ ಎಂದು ತ್ರಿಪುರ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಕುಮಾರ್‌ ದಾಸ್‌ ತಿಳಿಸಿದರು.

              ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಈ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

           'ಬಸ್‌ ಟಿಕೇಟ್‌ಗಳ ಮಾರಾಟ ಪ್ರಾರಂಭವಾಗಿದೆ. ಅಗರ್ತಲಾ-ಢಾಕಾ-ಕೋಲ್ಕತ್ತಾಗೆ ಪ್ರಯಾಣ ಮಾಡಬಯಸುವ ಪ್ರಯಾಣಿಕರು, ಮಾನ್ಯತೆ ಹೊಂದಿದ ಪಾಸ್‌ಪೋರ್ಟ್‌ ಹಾಗೂ ಪ್ರಯಾಣ ವೀಸಾವನ್ನು ಹೊಂದಿರಬೇಕು' ಎಂದು ರಾಜೇಶ್‌ ಕುಮಾರ್‌ ದಾಸ್‌ ತಿಳಿಸಿದರು.

            ಈ ಸಂಚಾರ ಸೌಲಭ್ಯವು ಶುಕ್ರವಾರ ಹೊರತುಪಡಿಸಿ, ವಾರದ ಆರು ದಿನಗಳಲ್ಲಿ ಲಭ್ಯವಿದೆ. 500 ಕಿ.ಮೀ ಸಂಚಾರದ ಪ್ರಯಾಣಕ್ಕೆ ₹2,300 ದರ ನಿಗದಿಪಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries