ಅಗರ್ತಲಾ: ಚಾಕೊಲೇಟ್ ಖರೀದಿಸಲು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಬಾಂಗ್ಲಾ ಬಾಲಕನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಬಿಎಸ್ಎಫ್ ಈ ಬಗ್ಗೆ ಮಾಹಿತಿ ನೀಡಿದ್ದು, ಶಲ್ದಾ ನದಿಯ ಹತ್ತಿರುವ ಗ್ರಾಮದ ಬಾಂಗ್ಲಾ ನಿವಾಸಿ ಎಮಾನ್ ಹೊಸೇನ್ ಬಂಧನಕ್ಕೊಳಗಾಗಿರುವ ಬಾಲಕನಾಗಿದ್ದು, ಭಾರತದ ತ್ರಿಪುರಾದ ಸಿಪಾಹಿಜಾಲ ಜಿಲ್ಲೆಯಲ್ಲಿ ತನ್ನ ನೆಚ್ಚಿನ ಚಾಕೊಲೇಟ್ ಖರೀದಿಸಲು ಬಂದಿದ್ದ.
ಈ ಬಾಲಕ, ಮುಳ್ಳುತಂತಿಯಲ್ಲಿ ರಂಧ್ರದಿಂದ ಗಡಿ ದಾಟಿ ಕಾಲಮ್ಚೌರ ಗ್ರಾಮಕ್ಕೆ ಬರುತ್ತಿದ್ದ, ಅದೇ ಮಾದರಿಯಲ್ಲಿ ವಾಪಸ್ ತೆರಳುತ್ತಿದ್ದ. ಆದರೆ ಏ.13 ಬಿಎಸ್ ಎಫ್ ಬಾಲಕನ ಚಟುವಟಿಕೆಗಳನ್ನು ಪತ್ತೆ ಮಾಡಿ ಆತನನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕನನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಸೋನಾಪುರ ಎಸ್ ಡಿಪಿಒ ಬನೋಜ್ ಬಿಪ್ಲಬ್ ದಾಸ್ ಹೇಳಿದ್ದಾರೆ.
ವಶಕ್ಕೆ ಪಡೆದ ಬಾಲಕನ ಬಳಿಯಿಂದ ಅಕ್ರಮವಾದ ವಸ್ತುಗಳು ಯಾವುದೂ ಪತ್ತೆಯಾಗಿಲ್ಲ ಆತನ ಬಳಿ 100 ಬಾಂಗ್ಲಾದೇಶಿ ಟಾಕಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.