ಉಪ್ಪಳ: ಚೇವಾರು ಸಮೀಪದ ಸುಬ್ಬಯಕಟ್ಟೆ ತರಂಗಿಣಿ ಆಟ್ರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಡೆದ ಸೌಹಾರ್ದ ಸಂಗಮ ಇಫ್ತಾರ್ ಕೂಟವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮುಸ್ಲಿಂ,ಹಿಂದು, ಕ್ರೈಸ್ತ ಧಾರ್ಮಿಕ ಪಂಡಿತರು, ಚುನಾಯಿತ ಸ್ಥಳೀಯಾಡಳಿತ ಪ್ರತಿನಿಧಿಗಳು,ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ನಾಯಕರು ಕೂಟದಲ್ಲಿ ಭಾಗವಹಿಸಿದರು.