ರೋಮ್: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್ನ ಸದ್ಗುರು ಕೈಗೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಲಂಡನ್ನಲ್ಲಿ ಆರಂಭಗೊಂಡಿದ್ದು, ಇದೀಗ ಐರೋಪ್ಯ ರಾಷ್ಟ್ರಗಳಾದ ಆಸ್ಟ್ರಿಯಾ, ಸ್ಲೊವೇನಿಯಾ ಮತ್ತು ಇಟಲಿಯಲ್ಲೂ ಪ್ರತಿಧ್ವನಿಸಿದೆ.
ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಾ.21ರಂದು ಲಂಡನ್ನಿಂದ ಏಕಾಂಗಿಯಾಗಿ ಬೈಕ್ ಪ್ರಯಾಣ ಹೊರಟಿರುವ ಸದ್ಗುರು, 27 ರಾಷ್ಟ್ರಗಳಲ್ಲಿ ನೂರು ದಿನಗಳೊಳಗೆ ಒಟ್ಟು 30 ಸಾವಿರ ಕಿ.ಮೀ.
ಪ್ರತಿದಿನ ಕನಿಷ್ಠ 10-15 ನಿಮಿಷ ಮೀಸಲಿಡಿ
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಮ್ಯೂಸಿಯಮ್ಸ್ ಕ್ವಾರ್ಟಿಯರ್ಗೆ ಸದ್ಗುರು ಭೇಟಿ ನೀಡಿದ್ದು, ಅದರ ನಿರ್ದೇಶಕ ಬೆಟಿನಾ ಲೀಡ್ಲ್ ಸದ್ಗುರುಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಸದ್ಗುರು ವಿಯೆನ್ನಾದಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್ ಸದ್ಗುರುವನ್ನು ಸ್ವಾಗತಿಸಿದರು. ಜನರು ಭೂಸ್ನೇಹಿಗಳಾಗಬೇಕು ಎಂದು ಕರೆ ನೀಡಿದ ಸದ್ಗುರು, ಪ್ರತಿಯೊಬ್ಬರೂ ಮಣ್ಣು ರಕ್ಷಣೆ ಸಲುವಾಗಿ ಪ್ರತಿ ದಿನ ಕನಿಷ್ಠ 10-15 ನಿಮಿಷ ಮೀಸಲಿಡಬೇಕು ಎಂದರು.
ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ
ಸ್ಲೊವೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿಗೆ ತೆರಳಿದ ಸದ್ಗುರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿತ್ತಿದ್ದನ್ನೆಲ್ಲ ಬೆಳೆಯುವ ಮಣ್ಣಿನ ಅದ್ಭುತ ಶಕ್ತಿ ಕುರಿತು ವಿವರಿಸಿದರು. ಇನ್ನು ನಟ ಗೋರನ್ ವಿಸ್ನ್ಜಿಕ್ ಜತೆ ಸಂವಾದ ನಡೆಸಿದ ಅವರು, ಮಣ್ಣು ರಕ್ಷಣೆ ಅಭಿಯಾನ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವನ್ನು ತಿಳಿಸಿದರು. ಸ್ಲೊವೇನಿಯಾದಲ್ಲಿನ ಭಾರತದ ರಾಯಭಾರಿ ನಮ್ರತಾ ಎಸ್. ಕುಮಾರ್ ಮಾತನಾಡಿ, ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ ಎಂದು ಬಣ್ಣಿಸಿದರು.
ಅಭಿಯಾನಕ್ಕೆ ಕಲಾತ್ಮಕ ಕಳೆ
ರೋಮ್ನಲ್ಲಿ ಮಣ್ಣು ರಕ್ಷಿಸಿ ಕುರಿತಾಗಿ ಐವರು ಇಟಾಲಿಯನ್ ಕಲಾವಿದರು ನೀಡಿದ ಕಚೇರಿ ಅಭಿಯಾನಕ್ಕೆ ಕಲಾತ್ಮಕ ಕಳೆಯನ್ನು ನೀಡಿತು. ಅಲ್ಲಿ ಸದ್ಗುರು ಅವರು 'ರೋಮ' ಎಂಬ ಕವಿತೆಯನ್ನು ವಾಚಿಸಿದರು. ಯುನೈಟೆಡ್ ನೇಷನ್ಸ್ ವರ್ಲ್ಡ್ ಫುಟ್ ಪ್ರೋಗ್ರಾಮ್ನ ಸಿಎಫ್ಒ ಮತ್ತು ಅಸಿಸ್ಟೆಂಟ್ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಮನೋಜ್ ಜುನೇಜ ಮಾತನಾಡಿ, ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ಘೋಷಿಸಿದರು. ಇದಕ್ಕೂ ಮೊದಲು ವೆನಿಸ್ ತಲುಪಿದ್ದ ಸದ್ಗುರು, ಅಲ್ಲಿನ ಯುನಿವರ್ಸಿಟ ಕಾ ಫಾಸ್ಕರಿಯಲ್ಲಿ ಪರಿಣತರ ಜತೆ ಜಗತ್ತಿನಲ್ಲಿ ಮಣ್ಣು ರಕ್ಷಣೆಯ ಅಗತ್ಯದ ಕುರಿತು ಸಂವಾದ ನಡೆಸಿದರು.