ತ್ರಿಶೂರ್: ವಿಶ್ವ ಮೂರ್ಖರ ದಿನದಂದು ಲಾರಿ ಚಾಲಕನನ್ನು ಮೂರ್ಖರನ್ನಾಗಿಸಿದ ಗೂಗಲ್ ಮ್ಯಾಪ್ ದಿನಾಚರಣೆಯನ್ನು ಸಾರ್ಥಕಗೊಳಿಸಿದೆ!. ಗೂಗಲ್ ನಲ್ಲಿ ಮೇಲೂರಿಗೆ ತೆರಳಿದ ಚಾಲಕ ಎರಡು ವಿದ್ಯುತ್ ಕಂಬ ಹಾಗೂ ಮನೆಯ ಶೀಟ್ ಒಡೆದು ಹಾಕಿದ್ದಾನೆ. ನಿನ್ನೆ ಈ ಘಟನೆ ನಡೆದಿದೆ. ಮೇವು ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ.
ದಾರಿ ತಿಳಿಯದೆ ಲಾರಿ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣ ಮುಂದುವರಿಸಿ ನಕ್ಷೆಯಲ್ಲಿನ ಸೂಚನೆಗಳನ್ನು ಅನುಸರಿಸಿ ಉಪರಸ್ತೆ ಪ್ರವೇಶಿಸಿದ. ಆರೋಹಣದ ನಂತರ, ಮತ್ತೆ ತಿರುಗಲು ನಕ್ಷೆಯಿಂದ ಸೂಚನೆ ಬಂತು. ಲಾರಿ ಚಾಲಕ ಯಾವ ಮುಲಾಜೂ ಇಲ್ಲದೆ ತಿರುಗಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಸದ್ದು ಕೇಳಿ ಧಾವಿಸಿ ಬಂದ ಸ್ಥಳೀಯರು ವಿಷಯ ತಿಳಿದು ಪೋಲೀಸರಿಗೆ ಮಾಹಿತಿ ನಿಡಿಒದರು. ಬಳಿಕ ಪೋಲೀಸರು ಆಗಮಿಸಿ ಭಾರೀ ಶ್ರಮ ನಡೆಸಿ ಚಾಲಕನನ್ನು ಪಾರುಗೊಳಿಸಿದರು.