ತಿರುವನಂತಪುರಂ: ಬಸ್ ಆಟೋ ಟ್ಯಾಕ್ಸಿ ದರ ಏರಿಕೆಗೆ ಅನುಮತಿ ನೀಡಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿದೆ. ಕನಿಷ್ಠ ಬಸ್ ಪ್ರಯಾಣ ದರವನ್ನು 10 ರೂ.ಮಾಡಲಾಗಿದೆ. ದರವನ್ನು ಕಿ.ಮೀ.ಗೆ 1 ರೂ.ಗೆ ಹೆಚ್ಚಿಸಲಾಗಿದೆ. ಆಟೋ ಕನಿಷ್ಠ ಶುಲ್ಕವನ್ನು 30 ರೂ.ಗೆ ಹೆಚ್ಚಿಸಲಾಗಿದೆ. ಬಸ್ ಪ್ರಯಾಣ ದರ ಏರಿಕೆಯು ಮೇ 1ರಿಂದ ಜಾರಿಗೆ ಬರಲಿದೆ ಎಂಬುದು ಪ್ರಾಥಮಿಕ ಮಾಹಿತಿ.
ಈ ಸಂಬಂಧ ಇಂದು ಆದೇಶ ಹೊರಬೀಳಲಿದೆ. ಕಳೆದ ತಿಂಗಳು ನಡೆದ ಎಲ್‍ಡಿಎಫ್ ಸಭೆಯು ನ್ಯಾಯಮೂರ್ತಿ ರಾಮಚಂದ್ರನ್ ಆಯೋಗ ಪ್ರಸ್ತಾಪಿಸಿದ್ದ ದರ ಏರಿಕೆಗೆ ಹಸಿರು ನಿಶಾನೆ ತೋರಿಸಿತ್ತು. ಇದನ್ನು ತಾತ್ವಿಕವಾಗಿ ಒಪ್ಪಿದ ಸಚಿವ ಸಂಪುಟ ದರ ಏರಿಕೆ ಮಾಡಲು ನಿರ್ಧರಿಸಿದೆ.
ರಾಜ್ಯವು ನಾಲ್ಕು ವರ್ಷಗಳ ನಂತರ ಬಸ್ ಪ್ರಯಾಣ ದರದಲ್ಲಿ ಕನಿಷ್ಠ ಪ್ರಯಾಣ ದರವನ್ನು ಏರಿಸುತ್ತಿದೆ. 2018 ರಲ್ಲಿ, ಕನಿಷ್ಠ ಶುಲ್ಕವನ್ನು ಏಳರಿಂದ ಎಂಟಕ್ಕೆ ಏರಿಸಲಾಗಿತ್ತು. ಆದರೆ ಕಿಲೋಮೀಟರ್ ದರವನ್ನು 2021 ರಲ್ಲಿ ಹೆಚ್ಚಿಸಲಾಯಿತು. ಆಗ ಪ್ರತಿ ಕಿ.ಮೀ.ಗೆ 70 ಪೈಸೆಯಿಂದ 90 ಪೈಸೆಗೆ ಹೆಚ್ಚಿಸಲಾಗಿತ್ತು. ಆಟೋ ಕನಿಷ್ಠ ಶುಲ್ಕವನ್ನು 25 ರಿಂದ 30 ರೂ. ಟ್ಯಾಕ್ಸಿಗೆ ಕನಿಷ್ಠ ಶುಲ್ಕ 200 ರೂ. ಹೆಚ್ಚಳಗೊಳಿಸಲಾಗಿದೆ.