ಪೆರ್ಲ: ಎಣ್ಮಕಜೆ ಗ್ರಾ.ಪಂ.ನ 2021-22ನೇ ಆರ್ಥಿಕ ವರ್ಷದ ಯೋಜನೆಯಂತೆ ಕಜಂಪಾಡಿ ಜಿ.ಡಬ್ಲು.ಎಲ್.ಪಿ. ಶಾಲೆಗೆ
ಲ್ಯಾಪ್ ಟಾಪ್ ನ್ನು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ವಿತರಿಸಿದರು.
ಬಳಿಕ ಸಭೆಯನ್ನುದ್ದೇಶಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಸರಕಾರ ಹಾಗೂ ಸ್ಥಳೀಯಾಡಳಿತ ಪಂಚಾಯತ್ ಯೋಜನೆಗಳನ್ನು ರೂಫೀಕರಿಸುತ್ತಿದ್ದು ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಶೆಯಲ್ಲಿ ಸಾಗಬೇಕಾಗಿರುವುದು ಭವಿಷ್ಯತ್ತಿಗೆ ಕೊಡುಗೆಯಾಗಲಿ ಎಂದರು. ವಾರ್ಡ್ ಸದಸ್ಯೆ ರೂಪಾವಾಣಿ ಆರ್ ಭಟ್ ಅಧ್ಯಕ್ಷತೆವಹಿಸಿದ್ದರು.ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಸಿ., ಮಾತೃ ಸಂಘದ ಅಧ್ಯಕ್ಷೆ ರೇವತಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ದಿನೇಶ ಬಿ.ಸ್ವಾಗತಿಸಿ ಹಿರಿಯ ಶಿಕ್ಷಕಿ ವಿಜಯಶ್ರೀ ವಿ ವಂದಿಸಿದರು. ಅಧ್ಯಾಪಕ, ಸಿಬ್ಬಂದಿ ವರ್ಗ ಹಾಗೂ ರಕ್ಷಕರು ಸಹಕರಿಸಿದರು.