ತಿರುವನಂತಪುರಂ: ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಸಂಚರಿಸುತ್ತಿದ್ದ ಕಾರು ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದೆ. ತಿರುವನಂತಪುರಂನ ಕುರವಂಕೋಣಂ ಬಳಿ ಈ ಘಟನೆ ನಡೆದಿದೆ. ಸಂಚಾರದ ವೇಳೆ ಸಚಿವರ ಕಾರಿನ ಹಿಂಬದಿ ಟೈರ್ ಸ್ಫೋಟಗೊಂಡು ಹಾರಿ ಹೋಗಿದೆ. ವಾಹನವು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದರೂ ವೇಗ ಕಡಿಮೆ ಮಾಡಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಅಪಘಾತಕ್ಕೀಡಾದ ವಾಹನದ ಬದಲು ಮತ್ತೊಂದು ವಾಹನದಲ್ಲಿ ಸಚಿವರು ಪ್ರಯಾಣ ಮುಂದುವರಿಸಿದರು. ಎರಡು ಲಕ್ಷಕ್ಕೂ ಹೆಚ್ಚು ಕಿ.ಮೀ ಕ್ರಮಿಸಿದ ಇನ್ನೋವಾ ಕಾರನ್ನು ವಿತ್ತ ಸಚಿವರು ಬಳಸುತ್ತಿದ್ದಾರೆ. ವಾಹನದ ದುಃಸ್ಥಿತಿಯಿಂದ ಅಪಘಾತ ಸಂಭವಿಸಿದೆ ಎಂದು ಸೂಚನೆಗಳು ತಿಳಿಸಿವೆ.