ಕೋಝಿಕ್ಕೋಡ್: ಫೋಟೋ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ನವವಿವಾಹಿತ ಸಾವನ್ನಪ್ಪಿದ್ದಾರೆ. ಕೋಝಿಕ್ಕೋಡ್ ಕುಟ್ಯಾಡಿ ನದಿಯಲ್ಲಿ ಫೋಟೋ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಮೃತರನ್ನು ಪಾಲೇರಿ ಮೂಲದ ರೆಜಿಲ್ ಎಂದು ಗುರುತಿಸಲಾಗಿದೆ. ಕುಟ್ಯಾಡಿ ಜಾನಕಿಕ್ಕಾಡ್ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ವಿವಾಹದ ಬಳಿಕದ ಫೋಟೋ ಶೂಟ್‌ಗಾಗಿ ದಂಪತಿ ಆಗಮಿಸಿದ್ದರು.
ನದಿಯ ದಡದಲ್ಲಿ ಫೋಟೋ ತೆಗೆಯುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ವಧು ಅವಘಡದಿಂದ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.