ನವದೆಹಲಿ: ರಾಮನವಮಿ ವೇಳೆ ದೆಹಲಿಯ ಜಹಾಂಗೀರ್‌ಪುರಿ ಮತ್ತು ಇತರ ಏಳು ರಾಜ್ಯಗಳಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ.

ವಕೀಲ ವಿಶಾಲ್ ತಿವಾರಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ. ಆರ್. ಗವಾಯಿ ಅವರಿದ್ದ ಪೀಠ ವಜಾಗೊಳಿಸಿತು.
'ನಿವೃತ್ತ ಸಿಜೆಐ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ನೀವು ಬಯಸುತ್ತೀರಿ. ಯಾರಾದರೂ ಬಿಡುವಾಗಿದ್ದಾರೆಯೇ... ಪತ್ತೆ ಮಾಡಿ. ಇದೆಂಥ ಪರಿಹಾರ? ಈ ನ್ಯಾಯಾಲಯ ನೀಡಲು ಸಾಧ್ಯವಿಲ್ಲದಂಥ ಪರಿಹಾರಗಳನ್ನು ಕೇಳಬೇಡಿ. ಅರ್ಜಿಯನ್ನು ವಜಾ ಮಾಡಿದ್ದೇವೆ' ಎಂದು ಪೀಠ ಹೇಳಿತು.
ಇದರ ಜತೆಗೆ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ 'ಬುಲ್ಡೋಜರ್' ಕಾರ್ಯಾಚರಣೆ ಕ್ರಮದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಬೇಕು ಎಂದು ಇದೇ ಅರ್ಜಿಯಲ್ಲಿ ಕೋರಲಾಗಿತ್ತು.