ಕಾಸರಗೋಡು: ಸಾಮೂಹಿಕ ವಿಪತ್ತಿಗೆ ಕಾರಣವಾಗುವ ಯುದ್ದಗಳು ಇನ್ನು ಮುಂದೆ ಬೇಡ ಎಂಬ ಮಹತ್ತರ ಸಂದೇಶವನ್ನು ಹೊಸದುರ್ಗ ಜಿಲ್ಲಾ ಕಾರಾಗೃಹದ ಕೈದಿಗಳು ಅಕ್ಷರದಲ್ಲಿ ಮೂಡಿಸಿದ್ದಾರೆ. ಹಾಗೆಂದು ಅದು ಲೇಖನಿಯೋ, ಬಳಪದಿಂದಲೋ ಅಲ್ಲವೇ ಅಲ್ಲ.
ಹೌದು. ಹೊಸದುರ್ಗದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೇ ಬೆಳೆಸಿದ ತರಕಾರಿ ತೋಟದ ಗಿಡಗಳನ್ನು ಅಕ್ಷರದ ರೂಪದಲ್ಲಿ ಸಿದ್ದಪಡಿಸಲಾಗಿತ್ತು. ಅದರಲ್ಲಿ ಈ ಸಂದೇಶ ಗಮನ ಸೆಳೆಯಿತು.
ಕೈದಗಳ ಕೃಷಿ ಕೊಯ್ಲನ್ನು ಪ್ರಧಾನ ಕೃಷಿ ಅಧಿಕಾರಿ ವೀಣಾ ರಾಣಿ ಉದ್ಘಾಟಿಸಿದರು. ಜೈಲು ಅಧೀಕ್ಷಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಜ್ಯೋತಿಕುಮಾರಿ, ಸಹಾಯಕ ಅಧೀಕ್ಷಕರಾದ ಪಿ.ಕೆ.ಷಣ್ಮುಖನ್ ಮತ್ತು ಇ.ಕೆ. ಆತ್ಮೀಯ, ಉಪ ಕಾರಾಗೃಹ ಅಧಿಕಾರಿ ಎನ್.ವಿ. ಪುಷ್ಪರಾಜನ್, ಜಿಮ್ಮಿ ಜಾನ್ಸನ್, ಪ್ರಮೋದ್, ಸಂತೋಷ್ ಕುಮಾರ್, ಸಹಾಯಕ. ಜೈಲು ಅಧಿಕಾರಿಗಳಾದ ವಿಜಯನ್, ವಿನೀತ್ ಪಿಳ್ಳೈ, ಬೈಜು, ಜಯಾನಂದನ್, ವಿಪಿನ್ ಹಾಗೂ ಹಸಿರು ಕೇರಳ ಮಿಷನ್ ಸಂಪನ್ಮೂಲ ವ್ಯಕ್ತಿ ಅಭಿರಾಜ್ ಎ.ಪಿ ಮಾತನಾಡಿದರು.
ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಹಸಿರು ಕಾರಾಗೃಹವಾಗಿ ಮಾರ್ಪಾಡಾಗಿರುವ ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಅಡೆತಡೆಯಿಲ್ಲದೆ ನಾನಾ ಬಗೆಯ ಸಾಗುವಳಿ ಮಾಡಲಾಗುತ್ತಿದೆ. ಈ ಬಾರಿ ಜೈಲಿನಲ್ಲಿ ಬೆಂಡೆ, ಪಾಲಕ್, ಬದನೆ, ಕುಂಬಳಕಾಯಿ, ಸೌತೆಕಾಯಿ, ಹಸಿಮೆಣಸಿನಕಾಯಿಯಲ್ಲದೆ ಅಪರಿಚಿತ ದ್ರಾಕ್ಷಿ ಕೃಷಿಯೂ ನಡೆಯುತ್ತಿದೆ. ಸಂಪೂರ್ಣವಾಗಿ ಕಾರಾಗೃಹದಿಂದಲೇ ಉತ್ಪಾದನೆಯಾಗುವ ಜೈವಿಕ ಅನಿಲ ಜೈವಿಕ ಗೊಬ್ಬರವನ್ನು ಕೃಷಿಗೆ ಬಳಸಲಾಗುತ್ತಿದೆ.ಕಳೆದ ಆರ್ಥಿಕ ವರ್ಷದಲ್ಲಿ ಬೆಳೆದ ವಿವಿಧ ತರಕಾರಿಗಳ ಮಾರುಕಟ್ಟೆ ಮೌಲ್ಯ ಸುಮಾರು ಅರ್ಧ ಲಕ್ಷ ರೂಪಾಯಿ. ಯೋಧರಾದ ಪ್ರದೀಪನ್ ಮತ್ತು ವಿಜಯನ್ ವಿನ್ಯಾಸಗೊಳಿಸಿದ ಯುದ್ಧ ವಿರೋಧಿ ಸಂದೇಶವನ್ನು ಕೋವಿಡ್ ಯೋಧರ ಗೌರವಾರ್ಥವಾಗಿ ನಿರ್ಮಿಸಲಾದ ಉದ್ಯಾನದಲ್ಲಿ ಹೊಂದಿಸಲಾಗಿದೆ.