HEALTH TIPS

ಮಕ್ಕಳಲ್ಲಿ ವಿಟಮಿನ್‌ ಎ ಕೊರತೆಯಾದಾಗ ಕಂಡು ಬರುವ ಲಕ್ಷಣಗಳಿವು

 ಹೆಚ್ಚಿನ ಮಕ್ಕಳಲ್ಲಿ ವಿಟಮಿನ್‌ ಕೊರತೆ ಕಂಡು ಬರುವುದು, ಮಕ್ಕಳು ಪೋಷಕಾಂಶದ ಆಹಾರ ಸರಿಯಾಗಿ ತಿನ್ನದಿದ್ದರೆ ಪೋಷಕಾಂಶದ ಕೊರತೆ ಉಂಟಾಗುವುದು. ಮಕ್ಕಳಿಗೆ ಎಲ್ಲಾ ಬಗೆಯ ವಿಟಮಿನ್ಸ್ ದೊರೆಯಬೇಕು, ಇಲ್ಲದಿದ್ದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಈ ಲೇಖನದಲ್ಲಿ ಮಕ್ಕಳಿಗೆ ವಿಟಮಿನ್ ಎ ಎಷ್ಟು ಅವಶ್ಯಕ, ಅದರ ಕೊರತೆ ಉಂಟಾದರೆ ಆಗುವ ತೊಂದರೆಗಳೇನು ಎಂಬುವುದರ ಬಗ್ಗೆ ವಿವರವಾಗಿ ನೀಡಲಾಗಿದೆ ನೋಡಿ:

ವಿಟಮಿನ್‌ ಎ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ. ಕಣ್ಣು ದೃಷ್ಟಿ ಚೆನ್ನಾಗಿರಲು, ರೋಗ ನಿರೋಧಕ ಶಕ್ತಿ ಉತತಮವಾಗಲು, ತ್ವಚೆ ಆರೋಗ್ಯಕ್ಕೆ ವಿಟಮಿನ್ ಎ ಅವಶ್ಯಕ.

ಆಹಾರದಲ್ಲಿ 2 ಬಗೆಯ ವಿಟಮಿನ್‌ಗಳು ಸಿಗುತ್ತವೆ. ಅವುಗಳೆಂದರೆ ವಿಟಮಿನ್ ಎ ಮತ್ತು ಪ್ರೊ ವಿಟಮಿನ್ ಎ.

ವಿಟಮಿನ್ ಎ ಅನ್ನು ರೆಟಿನೋಲ್‌ ಎಂದು ಕರೆಯಲಾಗುತ್ತಿದ್ದು ಇವು ಮಾಂಸಾಹಾರ, ಮೀನು, ಮೊಟ್ಟೆ, ಹಾಲಿನ ಉತ್ಪನ್ನಗಳಲ್ಲಿ ಇರುತ್ತದೆ.

ಇನ್ನು ನಮ್ಮ ದೇಹವು ಸಸ್ಯಾಹಾರಗಳಲ್ಲಿ ಅಂದರೆ ಕೆಂಪು, ಹಸಿರು, ಹಳದಿಹಾಗೂ ಕಿತ್ತಳೆ ಬಣ್ಣದ ಹಣ್ಣು ಹಾಗೂ ತರಕಾರಿಗಳಲ್ಲಿರುವ ಕ್ಯಾರೊಟಿನಾಯ್ಡ್‌ಗಳನ್ನು ವಿಟಮಿನ್ ಎ ಆಗಿ ಪರಿವರತಿಸುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಅಭಿವೃದ್ದಿ ಹೊಂದುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ವಿಟಮಿನ್ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ.

ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ:

1. ತ್ವಚೆ ಡ್ರೈಯಾಗುವುದು ತ್ವಚೆಯನ್ನು ಆರೋಗ್ಯವಾಗಿ ಇಡುವಲ್ಲಿ ವಿಟಮಿನ್‌ ಎ ಪಾತ್ರ ಪ್ರಮುಖವಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ತುರಿಕೆ ಉಂಟಾಗುವುದು, ತ್ವಚೆ ಒಣಗುವುದು, ತುರಿಕೆ ಹೆಚ್ಚುವುದು. ಈ ರೀತಿಯ ಸಮಸ್ಯೆಗೆ ವಿಟಮಿನ್ ಎ ಸಪ್ಲಿಮೆಂಟ್‌ ನೀಡುವ ಮೂಲಕ ಸರಿಪಡಿಸಬಹುದು. ಡ್ರೈ ಸ್ಕಿನ್‌ ಅನೇಕ ಕಾರಣಗಳಿಂದ ಉಂಟಾಗಬಹುದು, ಅದರಲ್ಲೊಂದು ವಿಟಮಿನ್ ಎ ಕೊರತೆಯೂ ಆಗಿರಬಹುದು.

2. ದೃಷ್ಟಿ ದೋಷ ವಿಟಮಿನ್‌ ಎ ಕೊರತೆ ಇರುವವರಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯೆಂದರೆ ದೃಷ್ಟಿದೋಷ. ಕಣ್ಣುಗಳು ಒಣಗುವುದು, ಬೇಗನೆ ಕಣ್ಣೀರು ಬರದಿರುವುದು ಇವೆಲ್ಲಾ ವಿಟಮಿನ್‌ ಎ ಕೊರತೆಯ ಲಕ್ಷಣಗಳಾಗಿವೆ. ವಿಟಮಿನ್‌ ಎ ಸಪ್ಲಿಮೆಂಟ್ ತೆಗೆದುಕೊಂಡರೆ ಈ ಸಮಸ್ಯೆ ದೂರಾಗುವುದು. ಸ್ವ ಚಿಕಿತ್ಸೆ ಮಾಡಬೇಡಿ, ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

3. ಇರಳು ಕುರುಡುತನ ವಿಟಮಿನ್‌ ಎ ಕೊರತೆ ತುಂಬಾ ಇದ್ದರೆ ಇರಳು ಕುರುಡುತನ ಅಂದ್ರೆ ರಾತ್ರಿ ಹೊತ್ತಿನಲ್ಲಿ ಕಣ್ಣು ಕಾಣಿಸುವುದಿಲ್ಲ. ಸಮಸ್ಯೆ ಶುರುವಾಗುತ್ತಿದ್ದಂತೆ ಚಿಕಿತ್ಸೆ ಪಡೆಯಿರಿ. ಆಗ ಈ ಸಮಸ್ಯೆ ಕಡಿಮೆ ಮಾಡಬಹುದು.

4. ಮಕ್ಕಳ ಬೆಳವಣಿಗೆ ಕುಂಠಿತವಾಗುವುದು ವಿಟಮಿನ್ ಎ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ವಯಸ್ಸಿಗೆ ತಕ್ಕ ಉತ್ತರ, ಮೈ ತೂಕ ಇರಲ್ಲ, ಕುಬ್ಜ ದೇಹವನ್ನು ಹೊಂದುತ್ತಾರೆ. ಮಕ್ಕಳ ಬೆಳವಣಿಗೆ ತುಂಬಾ ಕುಂಠಿತವಾಗುವುದು.

5. ಆಗಾಗ ಗಂಟಲು ಹಾಗೂ ಎದೆ ಭಾಗದಲ್ಲಿ ಸೋಂಕು ಉಂಟಾಗುವುದು ಮಕ್ಕಳಲ್ಲಿ ವಿಟಮಿನ್‌ ಎ ಕೊರತೆ ಉಂಟಾದರೆ ಗಂಟಲು ಹಾಗೂ ಎದೆಯಲ್ಲಿ ಆಗಾಗ ಇನ್‌ಫೆಕ್ಷನ್‌ ಅಥವಾ ಸೋಂಕು ಕಂಡು ಬರುವುದು. ಇದರಿಂದ ಗಂಟಲು, ಕೆಮ್ಮು ಈ ರೀತಿಯ ಸಮಸ್ಯೆ ಆಗಾಗ ಕಂಡು ಬರುವುದು.

6. ಗಾಯವಾದರೆ ಬೇಗನೆ ಒಣಗುವುದಿಲ್ಲ ವಿಟಮಿನ್ ಎ ಕೊರತೆ ಉಂಟಾದರೆ ಗಾಯವಾದರೆ ಬೇಗನೆ ಒಣಗುವುದಿಲ್ಲ. ಅಲ್ಲದೆ ವಿಟಮಿನ್‌ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ಕೊಲೆಜಿನ್‌ ಉತ್ಪತ್ತಿ ಕಡಿಮೆಯಾಗುವುದು.

7. ಹದಿ ಹರೆಯದ ಮಕ್ಕಳಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು ವಿಟಮಿನ್‌ ಎ ಕೊರತೆ ಉಂಟಾದರೆ ಮೊಡವೆ ಸಮಸ್ಯೆ ಶೇ.50ರಷ್ಟು ಹೆಚ್ಚಾಗುವುದು. ವಿಟಮಿನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವುದು ಹಾಗೂ ವಿಟಮಿನ್ ಎ ಇರುವ ಕ್ರೀಮ್‌ ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು. ಇನ್ನು ದೊಡ್ಡವರಲ್ಲಿ ವಿಟಮಿನ್‌ ಎ ಸಮಸ್ಯೆ ಉಂಟಾದರೆ ಬಂಜೆತನ ಕೂಡ ಉಂಟಾಗುವುದು.

ವಿಟಮಿನ್‌ ಎ ಇರುವ ಆಹಾರಗಳು * ಚೀಸ್‌ * ಮೊಟ್ಟೆ * ಮೀನು * ಮಾಂಸಾಹಾರ * ಹಾಲು ಮತ್ತು ಮೊಸರು * ಲಿವರ್‌ * ಹಳದಿ, ಕೆಂಪು, ಹಸಿರು ತರಕಾರಿಗಳು ಅಂದ್ರೆ ಪಾಲಾಕ್‌, ಕ್ಯಾರೆಟ್, ಸಿಹಿ ಗೆಣಸು,ಕೆಂಪು ದುಂಡು ಮೆಣಸು * ಹಳದಿ ಹಣ್ಣುಗಳು ಅಂದ್ರೆ ಮಾವಿನ ಹಣ್ಣು, ಪಪ್ಪಾಯಿ, ಆಪ್ರಿಕಾಟ್‌





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries