HEALTH TIPS

ಅಪಾಯಕಾರಿ ಓವರ್​ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹೋದರಿಯರಿಬ್ಬರಿಗೆ ಪ್ರಭಾವಿ ಪುತ್ರನಿಂದ ಥಳಿತ!

               ಮಲಪ್ಪುರಂ: ವೇಗವಾಗಿ ಬಂದಿದ್ದಲ್ಲದೆ, ಅಪಾಯಕಾರಿಯಾಗಿ ಓವರ್​ಟೇಕ್​ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಹೋದರಿಯರಿಬ್ಬರನ್ನು ವ್ಯಕ್ತಿಯೊಬ್ಬ ಥಳಿಸಿರುವ ಘಟನೆ ಮಲಪ್ಪುರಂನ ಪನಂಬರದಲ್ಲಿ ನಡೆದಿದೆ.

          ನಡು ರಸ್ತೆಯಲ್ಲೇ ಸಹೋದರಿಯರ ಮೇಲೆ ದರ್ಪ ಮೆರೆದ ಕಾರು ಚಾಲಕನನ್ನು ಸಿ.ಎಚ್​.

ಇಬ್ರಾಹಿಂ ಶಬೀರ್​ ಎಂದು ಗುರುತಿಸಲಾಗಿದೆ. ಈ ಘಟನೆ ಏ. 16ರಂದು ಪನಂಬರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕರಿಂಗಲ್ಲಥನಿ ಮೂಲದ ಸಹೋದರಿಯರಾದ ಅಸ್ನಾ ಕೆ ಅಜೀಜ್​ ಮತ್ತು ಹಮ್ನಾ ಕೆ. ಅಜೀಜ್​ ಮೇಲೆ ಶಬೀರ್​ ಹಲ್ಲೆ ಮಾಡಿದ್ದಾರೆ.

              ಸಹೋದರಿಯರಿಬ್ಬರು ಕೋಯಿಕ್ಕೋಡ್​ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಎಡಗಡೆಯಿಂದ ವೇಗವಾಗಿ ಶಬೀರ್ ಕಾರು ಓವರ್​ಟೇಕ್​ ಮಾಡಿದೆ. ಇದರಿಂದ ಗಾಬರಿಗೊಂಡ ಸಹೋದರಿಯರು ಕಾರು ಚಾಲಕನನ್ನು ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಶಬೀರ್​, ಸಹೋದರಿಯರಿಬ್ಬರಲ್ಲಿ ಸ್ಕೂಟರ್​ ಚಾಲನೆ ಮಾಡುತ್ತಿದ್ದವಳ ಕೆನ್ನಗೆ ಮೊದಲು ಬಾರಿಸಿದ್ದಾನೆ. ಬಳಿಕ ಇಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಯಾವಾಗ ಸ್ಥಳೀಯರು ಮಧ್ಯ ಪ್ರವೇಶಿಸಿದರು ಶಬೀರ್​ ಕಾರು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

           ಗಾಯಗೊಂಡಿರುವ ಸಹೋದರಿಯರು ತಿರುರಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ್ದರೂ ಸಣ್ಣ ಆರೋಪದ ಹೆಸರಿನಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ಕೊಲೆ ಯತ್ನವಾಗಿದ್ದರೂ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಸಹೋದರಿಯರು ಆರೋಪಿಸಿದ್ದಾರೆ. ರಾಜಿ ಸಂಧಾನಕ್ಕಾಗಿ ಪೊಲೀಸರ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.            ಆರೋಪಿ ಶಬೀರ್​ ಸ್ಥಳೀಯ ಲೀಗ್ ಮುಖಂಡರೊಬ್ಬರ ಪುತ್ರನಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries