ಉಪ್ಪಳ: ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ವತಿಯಿಂದ ಜರಗುತ್ತಿರುವ ತಾಳಮದ್ದಳೆ ಸಪ್ತಾಹದ ಮೂರನೇ ದಿನ ಹಿರಿಯ ವೇಷಧಾರಿ, ಅರ್ಥಧಾರಿ, ನಿರ್ದೇಶಕ ವಾಸುದೇವ ರಾವ್ ಸುರತ್ಕಲ್ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಮಂಗಲ್ಪಾಡಿ ಸಹಕಾರಿ ಬ್ಯಾಂಕ್ ನಿರ್ದೇಶಕಿ ಜಯಂತಿ ಟಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದು, ಯಕ್ಷ ಮೌಕ್ತಿಕ ತಂಡದ ಗುರು ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ದುಗಾರ್ಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಭೈಲ್ ಸುರತ್ಕಲ್ ತಂಡದವರಿಂದ ರುಕ್ಮಿಣಿ ಸ್ವಯಂವರ, ತಾಳಮದ್ದಳೆ ಜರಗಿತು.