ಇಡುಕ್ಕಿ: ಕರೋನಾ ನಂತರ ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಗುಪ್ತಚರ ವರದಿಯ ಪ್ರಕಾರ ಮುಖ್ಯವಾಗಿ ಇಡುಕ್ಕಿಯ ತೋಟ(ಚಹಾ) ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆದಿವೆ. ನೆಡುಂಕಂಡಂ ಮತ್ತು ಉಡುಂಬಂಚೋಳ ಪ್ರದೇಶವೊಂದರಲ್ಲೇ ಏಳು ಮದುವೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ಮಾಹಿತಿ ಹೊರಬಿದ್ದ ಬೆನ್ನಲ್ಲೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಘಟಕಕ್ಕೆ ಬಾಲ್ಯವಿವಾಹ ತಡೆ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಗುಪ್ತಚರ ಎಡಿಜಿಪಿ ಸೂಚಿಸಿದ್ದಾರೆ.
ನೆಡುಂಕಂಡಂನಿಂದ ಇಡುಕ್ಕಿಯ ಪೂಪಾರಾಗೆ 14 ರಿಂದ 15 ವರ್ಷದ ಹುಡುಗಿಯರನ್ನು ವಿವಾಹ ಮಾಡಿಕೊಡಲಾಗಿದೆ. ಪಾರಂತೋಡು, ಉಡುಂಬಂಚೋಳ ಮತ್ತು ಪೂಪಾರದಲ್ಲಿ ಹೆಚ್ಚಿವೆ. ರಾಜ್ಯ ವಿಶೇಷ ಶಾಖೆ ಮತ್ತು ಚೈಲ್ಡ್ ಲೈನ್ ಈ ಹಿಂದೆಯೇ ವರದಿ ನೀಡಿತ್ತು. ಘಟನೆ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಗುಪ್ತಚರ ಎಡಿಜಿಪಿ ನಿರ್ದೇಶನದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಆರ್. ಸಂತೋಷ್ ಕುಮಾರ್ ಸಲ್ಲಿಸಿರುವ ವರದಿಯಲ್ಲಿ ಗಂಭೀರ ಅಂಶಗಳಿವೆ.
ಲಾಕ್‌ಡೌನ್ ಅವಧಿಯಲ್ಲಿ, ಈ ಪ್ರದೇಶದ ಶಾಲೆಗಳನ್ನು ಮುಚ್ಚಲಾಗಿತ್ತು ಮತ್ತು ಆ ಪ್ರದೇಶದ ಮಕ್ಕಳು ತೋಟಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮಕ್ಕಳು 24-30 ವರ್ಷ ವಯಸ್ಸಿನ ಪುರುಷರನ್ನು ಮದುವೆಯಾಗಿದ್ದರು.