ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ 2022-2023 ಪದವಿಪೂರ್ವ ಪ್ರವೇಶಕ್ಕಾಗಿ ಅರ್ಜಿಗಳನ್ನು ಮೇ 6 ರಂದು ಸಂಜೆ 5 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಇಂಟನ್ರ್ಯಾಷನಲ್ ರಿಲೇಶನ್ಸ್ (ತಿರುವನಂತಪುರಂ ಕ್ಯಾಪಿಟಲ್ ಸೆಂಟರ್) ಮತ್ತು ಸರ್ಟಿಫಿಕೇಟ್ ಇನ್ ಲೈಫ್ ಸ್ಕಿಲ್ಸ್ ಎಂಬಿವುಗಳು ವಿಶ್ವವಿದ್ಯಾನಿಲಯವು ನಡೆಸುವ ಕೋರ್ಸ್‍ಗಳಾಗಿವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ)ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ. cuet.samarth.ac.in ಮತ್ತು www.nta.ac.in ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೇರಳದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಭಾರತದಲ್ಲಿ 547 ಪರೀಕ್ಷಾ ಕೇಂದ್ರಗಳು ಇರಲಿದ್ದು, ವಿದೇಶಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.