ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ 2021-22ನೇ ವಾರ್ಷಿಕ ಯೋಜನೆಗೊಳಪಡಿಸಿದ ಮೂರು ಮಿನಿ ಮಾಸ್ಟ್ ಲೈಟ್ ಗಳನ್ನು ಉದ್ಘಾಟಿಸಲಾಯಿತು.
ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನ ಪರಿಸರದಲ್ಲಿ, ಪೆರ್ಲ ಆರ್.ಟಿ.ಒ.ಚೆಕ್ ಪೋಸ್ಟ್ ಹಾಗೂ ಮಣಿಯಂಪಾರೆಯಲ್ಲಿ ಸ್ಥಾಪಿಸಲಾದ ಲೈಟನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂ.ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಸಹಿತ ಹಲವಾರು ಗಣ್ಯರು, ಸ್ಥಳೀಯರು ಭಾಗವಹಿಸಿದ್ದರು.