ಜಮ್ಮು: ಕಣಿವೆ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ ಜಮ್ಮು ನಗರದ ಹಲವೆಡೆ ಶುಕ್ರವಾರ ಪ್ರತಿಭಟನೆ ನಡೆಯಿತು. ಆತ್ಮಾಹುತಿ ದಾಳಿ ವೇಳೆ ಇಬ್ಬರು ಪಾಕ್ ಉಗ್ರರು, ಸಿಐಎಫ್ ಐಫ್ ನ ಒರ್ವ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಂಬಾ ಜಿಲ್ಲೆ ಭೇಟಿಗೆ ಎರಡು ದಿನ ಬಾಕಿಯಿರುವಂತೆಯೇ, ಜಮ್ಮು ಹೊರವಲಯದ ಸೇನಾ ಶಿಬಿರದ ಬಳಿ ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಜೈಸ್ -ಇ- ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಪಾಕಿಸ್ತಾನದ ಉಗ್ರರು ಹತ್ಯೆಯಾಗಿದ್ದಾರೆ. ಈ ವೇಳೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ಭದ್ರತಾ ಪಡೆ ಮೇಲಿನ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಜಮ್ಮು-ಕಾಶ್ಮೀರದ ಶಿವಸೇನಾ ಘಟಕ, ಜಮ್ಮು ಮತ್ತು ಕಾಶ್ಮೀರದ "ಶಾಂತಿಯುತ ವಾತಾವರಣ"ವನ್ನು ಹಾಳುಮಾಡಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.
ಶಿವಸೇನಾ ಜಿಲ್ಲಾಧ್ಯಕ್ಷ ಮನೀಶ್ ಸಾಹ್ನಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು, ಪಾಕಿಸ್ತಾನ ವಿರೋಧಿ ಹಾಗೂ ಪಾಕ್ ಪರ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಮ್ಮುವಿನ ಅನೇಕ ಕಡೆ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕಾಂಗ್ರೆಸ್, ಎಎಪಿ, ಎಪಿಎಂಸಿಸಿ ಸೇರಿದಂತೆ ಇತರ ಪಕ್ಷಗಳು ಉಗ್ರರ ದಾಳಿಯನ್ನು ಖಂಡಿಸಿವೆ.