ಕಾಂಗ್ರೆಸ್ ಸರ್ಕಾರ ಈ ಹಿಂದೆ ತೈಲ ಬಾಂಡ್ ಮೂಲಕ ಮಾಡಿದ್ದ ಸಾಲಗಳಿಗೆ ಬಿಜೆಪಿ ಸರ್ಕಾರ 93 ಸಾವಿರ ಕೋಟಿ ರೂ. ಮರುಪಾವತಿ ಮಾಡಿದೆ. 2026ರ ಒಳಗಾಗಿ 1.48 ಲಕ್ಷ ಕೋಟಿ ರೂ.ಗಳನ್ನು ಪಾವತಿ ಮಾಡಲಾಗುವುದು. ಹೆಚ್ಚಿನ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ವಾದ ಏನಿತ್ತು?
ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡುತ್ತಿಲ್ಲ. ಇಂಧನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದ್ದೆ. ಇದನ್ನು ತಪ್ಪಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 8 ವರ್ಷದಿಂದ ತೈಲಗಳ ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ 100 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಆದಅಯ ಬಂದಿದೆ. ಈ ಹಣವನ್ನು ಸರ್ಕಾರ ಯಾವುದಕ್ಕೆ ವೆಚ್ಚ ಮಾಡಿದ ಎಂಬುದನ್ನು ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಗ್ರಹಿಸಿದ್ದರು.
- ಅಭಿವೃದ್ಧಿ ಯೋಜನೆಗಳಿಗೆ 8 ವರ್ಷದಲ್ಲಿ 91 ಲಕ್ಷ ಕೋಟಿ ರೂ. ವೆಚ್ಚ
- ಸಾಮಾಜಿಕ ಕ್ಷೇತ್ರದ ಯೋಜನೆಗಳು, ಮೂಲಸೌಕರ್ಯ ನಿರ್ವಣಕ್ಕೆ ಮೋದಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ
- ಕಾಂಗ್ರೆಸ್ ಆಡಳಿತದ 10 ವರ್ಷದಲ್ಲಿ 49.2 ಲಕ್ಷ ಕೋಟಿ ರೂ. ವೆಚ್ಚ
- ಆರ್ಬಿಐ ವರದಿಯಲ್ಲಿ ಉಲ್ಲೇಖ
- ಕಾಂಗ್ರೆಸ್ ನಾಯಕ ಪಿ. ಚಿದಂಬರಂಗೆ ಸಚಿವೆ ನಿರ್ಮಲಾ ತಿರುಗೇಟು
- 8 ವರ್ಷದಲ್ಲಿ ಆಹಾರ, ತೈಲ, ರಾಸಾಯನಿಕ ಗೊಬ್ಬರ ಇನ್ನಿತರ ಸಬ್ಸಿಡಿಗಳಿಗೆ 24.85 ಲಕ್ಷ ಕೋಟಿ ರೂ. ವಚ್ಚ
- ಬಂಡವಾಳ ನಿರ್ವಣಕ್ಕಾಗಿ 26.3 ಕೋಟಿ ರೂ. ಬಳಕೆ
- ಇದೇ ಕಾರಣಕ್ಕೆ 10 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ವೆಚ್ಚ 13.9 ಲಕ್ಷ ಕೋಟಿ ರೂ.