ದೆಹಲಿಯ ವಿಶ್ವವಿಖ್ಯಾತ ಕುತುಬ್ ಮಿನಾರ್ ವಾಸ್ತವವಾಗಿ ವಿಷ್ಣುಸ್ತಂಭ ಎಂಬ ಹೇಳಿಕೆ ನೀಡುವ ಮೂಲಕ ವಿಶ್ವಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ದೆಹಲಿಯ ವಿಶ್ವವಿಖ್ಯಾತ ಕುತುಬ್ ಮಿನಾರ್ ವಾಸ್ತವವಾಗಿ ವಿಷ್ಣುಸ್ತಂಭ ಎಂಬ ಹೇಳಿಕೆ ನೀಡುವ ಮೂಲಕ ವಿಶ್ವಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.
27 ಹಿಂದೂ- ಜೈನ ದೇವಸ್ಥಾನಗಳನ್ನು ಧ್ವಂಸ ಮಾಡಿ ಲಭ್ಯವಾದ ಸಾಮಗ್ರಿಗಳಿಂದ ಕುತುಬ್ ಮಿನಾರ್ ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಕುತುಬ್ ಮಿನಾರ್ ವಾಸ್ತವವಾಗಿ ವಿಷ್ಣುಸ್ತಂಭ. 27 ಹಿಂದೂ- ಜೈನ ದೇಗುಲಗಳನ್ನು ಧ್ವಂಸ ಮಾಡಿ ಪಡೆದ ಸಾಮಗ್ರಿಗಳಿಂದ ಇದನ್ನು ರಚಿಸಲಾಗಿದೆ. ಹಿಂದೂ ಸಮುದಾಯವನ್ನು ಅಣಕಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದೆ" ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‍ಐ ವರದಿ ಮಾಡಿದೆ.
ಹಿಂದೆ ಕೆಡವಿದ ಎಲ್ಲ 27 ದೇವಸ್ಥಾನಗಳನ್ನು ಕೂಡಾ ಪುನರ್ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ 27 ಕಡೆಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ, ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಬನ್ಸಲ್ ಒತ್ತಾಯಿಸಿದ್ದಾರೆ.