ಮಂಜೇಶ್ವರ: ಕಲೆ, ಸಂಸ್ಕøತಿ, ಅರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಕಳೆದ ಇಪ್ಪತ್ತೈದು ವರ್ಷಗಳಿಂದ ಅಪಾರ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಇನ್ಫೋಸಿಸ್ ಪ್ರತೀಷ್ಠಾನವು ಗಡಿನಾಡು ಕಾಸರಗೋಡಿನ ಜಿ. ವಿ. ಎಚ್. ಎಸ್. ಎಸ್. ಕುಂಜತ್ತೂರು ಶಾಲೆಗೆ 23 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನ್ನು ಕೊಡುಗೆಯಾಗಿ ನೀಡಲು ಉದ್ದೇಶಿಸಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊರವರು ಮಾತನಾಡಿ, ಖಾಸಗಿ ಸಂಸ್ಥೆಯೊಂದು ಸರ್ಕಾರ ನಿರ್ವಹಿಸಬೇಕಾದ ಪ್ರಗತಿಪರ ಕೆಲಸವೊಂದನ್ನು ಮಾಡುತ್ತಿರುವುದು ಶ್ಲಾಘನೀಯ. ಅದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ ಎಂದು ನುಡಿದರು. ಫೌಂಡೇಶನ್ ನ ಪ್ರತಿನಿಧಿಯಾಗಿ ಆಗಮಿಸಿ ಶಿಲಾನ್ಯಾಸವನ್ನು ನಡೆಸಿಕೊಟ್ಟ ಇನ್ಫೋಸಿಸ್ ಲಿಮಿಟೆಡ್ ನ ಕಾಪೆರ್Çರೇಟ್ ಅಫೇರ್ಸ್ ನ ಮುಖ್ಯಸ್ಥರಾದ ಸಂತೋಷ್ ಅನಂತಪುರರವರು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿರುವ ನಮ್ಮ ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಕಟ್ಟಡವನ್ನು ನಿರ್ಮಿಸುತ್ತಿದ್ದೇವೆ. ಇದರ ಪೂರ್ಣಪ್ರಮಾಣದ ಪ್ರಯೋಜನವು ವಿದ್ಯಾರ್ಥಿಗಳಿಗೆ ದೊರಕುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಷನ್ ನ ಸದಸ್ಯೆ ಕಮಲಾಕ್ಷಿ. ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಶುಭಹಾರೈಸಿದರು. ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ಕೆ. ಎಚ್. ಮೊಹಮ್ಮದ್, ಶಾಲಾ ಎಸ್. ಎಂ. ಸಿ. ಸದಸ್ಯರುಗಳಾದ ಯು. ಎಚ್. ಅಬ್ದುಲ್ ರಹೆಮಾನ್, ಈಶ್ವರ ಮಾಸ್ತರ್, ವೊಕೆಷನಲ್ ಹೈಯರ್ ಸೆಕೆಂಡರಿ ವಿಭಾಗದ ಪ್ರಾಚಾರ್ಯ ಶಿಶುಪಾಲನ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹೆಮಾನ್ ಉದ್ಯಾವರ, ಹಿರಿಯ ಶಿಕ್ಷಕಿ ಲಲಿತ, ಶಿಕ್ಷಕ ಅಶ್ರಫ್. ಸಿ., ಮಾತೃಸಂಘದ ಅಧ್ಯಕ್ಷೆ ಮೋಹಿನಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಟ್ಟಡ ಕಾಮಗಾರಿಯನ್ನು ವಹಿಸಿಕೊಂಡಿರುವ ಎಂ. ಆರ್. ಕನ್ಸ್ಟ್ರಕ್ಷನ್ ನ ಶಂಕರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಯ ಬಾಲಕೃಷ್ಣ. ಜಿ. ಸ್ವಾಗತಿಸಿ ಶಿಕ್ಷಕ ರವೀಂದ್ರ ರೈ ವಂದಿಸಿದರು. ಶಿಕ್ಷಕ ದಿವಾಕರ ಬಲ್ಲಾಳ್ ರವರು ಕಾರ್ಯಕ್ರಮ ನಿರೂಪಿಸಿದರು.