ನವದೆಹಲಿ: ಐತಿಹಾಸಿಕ ಕುತುಬ್ ಮಿನಾರ್ ನಲ್ಲಿರುವ ಎರಡು ಗಣೇಶ ವಿಗ್ರಹವನ್ನು ತೆರವುಗೊಳಿಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ದೆಹಲಿಯ ನ್ಯಾಯಾಲಯವೊಂದು ನಿರ್ದೇಶಿಸಿದೆ.
ಮುಂದಿನ ವಿಚಾರಣೆವರೆಗೆ ಯಾಥಾಸ್ಥಿತಿ ಕಾಪಾಡುವಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಏಪ್ರಿಲ್ 13 ರಂದು ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದ್ದಾರೆ.
ಜೈನ ತೀರ್ಥಂಕರ ರಿಷಬ್ ದೇವರ ಪರವಾಗಿ ಅರ್ಜಿ ಸಲ್ಲಿಸಿದ ವಕೀಲ ಹರಿಶಂಕರ್ ಜೈನ್, ಕುತುಬ್ ಐಬಾಕ್ ನಿಂದ ಸುಮಾರು 27 ದೇವಾಲಯಗಳು ಭಾಗಶ: ಹಾನಿಗೊಳಲಾಗಿವೆ. ಕುತುಬ್ ಮಿನರ್ ಆವರಣದಲ್ಲಿ ಗಣೇಶನ ಎರಡು ವಿಗ್ರಹಗಳಿದ್ದು, ಅವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ತೆರವುಗೊಳಿಸಿರುವ ಸಾಧ್ಯತೆಯಿರುವುದಾಗಿ ಹೇಳಿದರು.
ಇದು ವಿವಿಧ ವರ್ಗದ ಜನರು ಹಾಗೂ ಗಣೇಶ್ ವಿಗ್ರಹದಲ್ಲಿ ನಂಬಿಕೆ ಇಟ್ಟಿರುವವರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ಹಂತದಲ್ಲಿ ಪ್ರತಿವಾದಿಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದರು.