ಭೋಪಾಲ್ : ಉಜ್ಜೈನಿ ನಗರದಲ್ಲಿರುವ ಹೋಟೆಲ್‌ಗಳ ನಾಮಫಲಕಗಳನ್ನು ಹಿಂದಿಯಲ್ಲೇ ಬರೆಸಬೇಕು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚನೆ ನೀಡಿದ್ದಾರೆ. ಇಂಥ ಕ್ರಮದಿಂದ ಸ್ಥಳೀಯ ಭಾಷೆಗೆ ಉತ್ತೇಜನ ಸಿಗಲಿದೆ ಎಂದು ಪ್ರತಿಪಾದಿಸಿದರು.
ಭೋಪಾಲ್ : ಉಜ್ಜೈನಿ ನಗರದಲ್ಲಿರುವ ಹೋಟೆಲ್‌ಗಳ ನಾಮಫಲಕಗಳನ್ನು ಹಿಂದಿಯಲ್ಲೇ ಬರೆಸಬೇಕು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚನೆ ನೀಡಿದ್ದಾರೆ. ಇಂಥ ಕ್ರಮದಿಂದ ಸ್ಥಳೀಯ ಭಾಷೆಗೆ ಉತ್ತೇಜನ ಸಿಗಲಿದೆ ಎಂದು ಪ್ರತಿಪಾದಿಸಿದರು.
ಹಿಂದೂಗಳ ಹೊಸ ವರ್ಷವಾದ 'ಚೈತ್ರ ಮಾಸದ ಪ್ರಾರಂಭ'ದ ಅಂಗವಾಗಿ ಶನಿವಾರ ಇಲ್ಲಿ ಆಯೋಜಿಸಲಾಗಿದ್ದ 'ಉಜ್ಜೈನಿ ಗೌರವ' ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ವರ್ಷಕ್ಕೆ ನಾವು ಹೊಸ ನಿರ್ಣಯ ಕೈಗೊಳ್ಳಬೇಕು. ಉಜ್ಜೈನಿಯಲ್ಲಿ ಈಗಾಗಲೇ ಇಂಗ್ಲಿಷ್‌ನಲ್ಲಿರುವ ಹೋಟೆಲ‌್‌ಗಳ ಹೆಸರುಗಳನ್ನು ಹಿಂದಿಯಲ್ಲಿ ಬರೆಸಬೇಕು. ನಮ್ಮ ಭಾಷೆ ಬೆಳೆಯುವುದರಿಂದ ನಮ್ಮ ಶೈಕ್ಷಣಿಕ ಮತ್ತು ತಾತ್ವಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಉಜ್ಜೈನಿಯಲ್ಲಿ ಆಚರಣೆಯಲ್ಲಿರುವ ಭಿಕ್ಷುಕ ಪ್ರವೃತ್ತಿ ಬಂದ್ ಆಗಬೇಕು. ಇದರ ಬದಲಿಗೆ ಬಡವರು ಮತ್ತು ಅವರ ಮಕ್ಕಳಿಗಾಗಿ ಔತಣ ಏರ್ಪಡಿಸಬೇಕು ಎಂದರು.