ಕೊಟ್ಟಾಯಂ: ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಟ್ಟಾಯಂಗೆ ಬಂದಿದ್ದ ಅರಣ್ಯ ಸಚಿವ ಹಾಗೂ ಎನ್ ಸಿಪಿ ಮುಖಂಡ ಎ.ಕೆ.ಶಶೀಂದ್ರನ್ ಅವರ ವಾಹನ ಕೆಟ್ಟುಹೋದ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಅತಿಥಿ ಗೃಹದಿಂದ ಹೊರಡಲು ಮುಂದಾಗಿದ್ದ ಸಚಿವರು ಕಾರು ಸ್ಟಾರ್ಟ್ ಆಗದ ಕಾರಣ ಬಹಳ ಹೊತ್ತು ಕಾದರು.ಬಳಿಕ ಅರಣ್ಯ ಇಲಾಖೆ ಒದಗಿಸಿದ್ದ ಮತ್ತೊಂದು ವಾಹನದಲ್ಲಿ ಸಚಿವರು ಕಾರ್ಯಕ್ರಮಕ್ಕೆ ತೆರಳಿದರು.
ನಿನ್ನೆ ಈ ಘಟನೆ ನಡೆದಿದೆ. ದರ್ಶನ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರು ಬೆಳಗ್ಗೆ 10 ಗಂಟೆಗೆ ಕೊಟ್ಟಾಯಂಗೆ ಆಗಮಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಚಿವರು ಕೊಟ್ಟಾಯಂ ಪಿಡಬ್ಲ್ಯುಡಿ ವಿಶ್ರಾಂತಿ ಗೃಹಕ್ಕೆ ಆಗಮಿಸಿ ವಿಶ್ರಾಂತಿ ಪಡೆದರು.
ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ನಂತರ ಸಚಿವರು ಕಾರ್ಯಕ್ರಮಕ್ಕೆ ತೆರಳಲಿದ್ದರು. ಇದೇ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಇದಾದ ಬಳಿಕ ಸಚಿವರು ಐದನೇ ಸಂಖ್ಯೆಯ ವಾಹನದಲ್ಲಿ ಸ್ಥಳಕ್ಕೆ ತೆರಳಬೇಕಿದ್ದರು. ಆದರೆ ಸಚಿವರು ವಾಹನದ ಬಳಿಗೆ ಬಂದಾ ದೃಶ್ಯ ಬೇರೆಯೇ ಆಗಿತ್ತು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಐದನೇ ನಂಬರಿನ ಸರ್ಕಾರಿ ವಾಹನವನ್ನು ತಳ್ಳುತ್ತಿದ್ದರು. ಇದನ್ನು ನೋಡಿದ ನಂತರ ಸಚಿವರು ಕಾರಿನತ್ತ ನೋಡಿ ಸ್ವಲ್ಪ ಹೊತ್ತು ಕಾದರು. ಇದೇ ವೇಳೆ ವಾಹನ ತಳ್ಳುತ್ತಿರುವುದನ್ನು ಮಾಧ್ಯಮಗಳು ಚಿತ್ರೀಕರಿಸಲು ಆರಂಭಿಸಿದ ನಂತರ ಕಾರ್ಯಕರ್ತರು ಪ್ರಯತ್ನ ಕ್ಯೆಬಿಟ್ಟರು. ಇನ್ನು ವಾಹನ ತಳ್ಳಿದರೆ ನಗೆಪಾಟಾಲಿಗೆ ಗುರಿಯಾಗಬೇಕಾದಿತೆಂದು ಕಾರ್ಯಕರ್ತರು ನಾಚಿದರು.