ಕಾಸರಗೋಡು: ಗಡಿನಾಡ ಕೋಗಿಲೆ ವಸಂತ ಬಾರಡ್ಕ ಅವರು ಹಾಡಿರುವ "ಆದಿ ಸ್ಥಾನದ ಕೊರಗಜ್ಜ" ವೀಡಿಯೋ ಹಾಡಿನ ಬಿಡುಗಡೆ ಬೇಳ ಕುದ್ರೆಪ್ಪಾಡಿ ಪೆರಡಾನಮೂಲೆ ಶ್ರೀ ಚೌಕಾರು ಮಂತ್ರವಾದಿ ಗುಳಿಗ, ಶ್ರೀ ಆದಿ ಕೊರಗು ತನಿಯ, ಕಲ್ಲುರ್ಟಿ ದೈವಸ್ಥಾನದಲ್ಲಿ ಜರುಗಿತು.
ವಸಂತ ಬಾರಡ್ಕ ಅವರು ರಚಿಸಿ, ಸಂಗೀತ ನಿರ್ದೇಶಿಸಿ, ಹಾಡಿರುವ ಈ ಗಾನ ಗಾನತರಂಗ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. ದೈವಸ್ಥನದ ವಾರ್ಷಿಕೋತ್ಸವ ಮತ್ತು ದೈವಕೋಲ ಅಂಗವಾಗಿ ನಡೆದ ಸಮಾರಂಭದಲ್ಲಿ ಹಿರಿಯ ಕವಿ, ವ್ಯಂಗ್ಯ ಚಿತ್ರಕಾರ ವೆಂಕಟಭಟ್ ಎಡನೀರು ಬಿಡುಗಡೆಗೊಳಿಸಿದರು. ಕವಿ,ವೇದಮೂರ್ತಿ ಉದನೇಶ್ವರ ಪ್ರಸಾದ್ ಮೂಲಡ್ಕ, ವಸಂತ ಬಾರಡ್ಕ, ಉಷಾ ಟಿ.ಎನ್.ಕುದ್ರೆಪ್ಪಾಡಿ, ಹಾಡುಗಾರ್ತಿ ಶುಭಾ ಕುದ್ರೆಪ್ಪಾಡಿ, ದೈವಸ್ಥಾನದ ಪಾತ್ರಿ ಸೀತಾರಾಮ ಪಿ., ಸೇವಾ ಸಮಿತಿ ಅಧ್ಯಕ್ಷ ಪಿ.ರಾಮ, ಕಾರ್ಯದರ್ಶಿ ಅಶ್ವಥ್, ರಾಮ, ಸುಂದರ, ಮಾಧವ ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.