ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಗುತ್ತಿದ್ದ ಮಾರ್ಗದಲ್ಲಿ ಮೊದಲು ಆಂಬುಲೆನ್ಸ್ ಸಾಗಲು ದಾರಿ ಮಾಡಿಕೊಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಗುತ್ತಿದ್ದ ಮಾರ್ಗದಲ್ಲಿ ಮೊದಲು ಆಂಬುಲೆನ್ಸ್ ಸಾಗಲು ದಾರಿ ಮಾಡಿಕೊಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗುರುವಾರ ಲಖನೌದಲ್ಲಿ ರಾಜ ಭವನದ ಸಮೀಪ ಈ ಘಟನೆ ನಡೆದಿರುವುದಾಗಿ ಸಂಚಾರ ವಿಭಾಗದ ಡಿಸಿಪಿ ಸುಭಾಷ್ ಚಂದ್ರ ಶಕ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ವಾಹನ ಹಾಗೂ ಅವರ ಬೆಂಗಾವಲು ವಾಹನಗಳು ತಡೆಯಿಲ್ಲದೆ ಸಾಗಲು ಸೂಕ್ತ ಸಂಚಾರ ವ್ಯವಸ್ಥೆ ರೂಪಿಸಲಾಗಿತ್ತು. ಇತರೆ ವಾಹನಗಳ ಸಂಚಾರ ನಿಲ್ಲಿಸಲಾಗಿತ್ತು. ಹಾಗೆ ನಿಂತಿದ್ದ ವಾಹನಗಳಲ್ಲಿ ಆಂಬುಲೆನ್ಸ್ ಸಹ ಇತ್ತು.
'ಸಾಗುವ ದಾರಿಯಲ್ಲಿ ಆಂಬುಲೆನ್ಸ್ ನಿಂತಿರುವುದನ್ನು ಕಂಡ ಯೋಗಿ ಆದಿತ್ಯನಾಥ್ ಅವರು, ನಮ್ಮ ವಾಹನಗಳ ಸಂಚಾರವನ್ನು ನಿಲ್ಲಿಸಿ ಮೊದಲು ಆಂಬುಲೆನ್ಸ್ ಸಾಗಲು ಅವಕಾಶ ನೀಡುವಂತೆ ತಮ್ಮ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದರು' ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಕಂಡ ಸಾರ್ವಜನಿಕರು, ಯೋಗಿ ಅವರ ನಡೆಗೆ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.