ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಈ ವರ್ಷ ನಿವೃತ್ತರಾಗುವ ಪ್ರಾಂಶುಪಾಲ ಥೋಮಸ್ ಮಾಥ್ಯೂ ಮತ್ತು ಶಿಕ್ಷಕಿ ಗುಲಾಬಿ ಎನ್ ಅವರಿಗೆ ಶಾಲಾ ನೌಕರ ಸಂಘದ ವತಿಯಿಂದ ವಿದಾಯ ಕೂಟ ಶಾಲಾ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಶಿಕ್ಷಣ ಉಪನಿರ್ದೇಶಕ ಕೆ ಶ್ರೀನಿವಾಸ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಥೋಮಸ್ ಮಾಥ್ಯೂ ಮತ್ತು ಗುಲಾಬಿ ಟೀಚರ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಅಭಿನಂದನಾ ಪತ್ರ, ಫಲಪುಷ್ಪ ಮತ್ತು ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು. ಶಾಲೆಯಿಂದ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ಗೋಪಣ್ಣ ಎಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗುಲಾಬಿ ಟೀಚರ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಸಾಕ್ಷ್ಯಚಿತ್ರ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು. ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಗುಲಾಬಿ ಎನ್ ಅವರು ಶಾಲೆಗೆ 60 ಲೀಟರ್ ಕುಕ್ಕರ್ ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಪೈವಳಿಕೆ, ಮಾತೃ ಸಂಘದ ಅಧ್ಯಕ್ಷೆ ಸರೋಜ, ಎಲಿಜಬೆತ್, ಅಸೀಸ್ ಕಳಾಯಿ, ಕ್ರೆಸೆಂಟ್ ಕ್ಲಬ್ ಅಧ್ಯಕ್ಷ ಅಬ್ದುಲ್ ರಹಿಮಾನ್, ನಿವೃತ್ತ ಶಿಕ್ಷಕ ನಾರಾಯಣ ರಾವ್, ಕೆ ಎಂ ಬಲ್ಲಾಳ್, ಬಾಲಕೃಷ್ಣ ಕಾಯರ್‍ಕಟ್ಟೆ, ರಾಧಾಕೃಷ್ಣ ಕಾಯರ್ ಕಟ್ಟೆ, ಅಬ್ದುಲ್ ಕರೀಂ ಪಿಕೆ, ಶಶಿಕಲ ಟೀಚರ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ವಿಶ್ವನಾಥ ಕಂಚಿಕಟ್ಟೆ ಸ್ವಾಗತಿಸಿ ನೌಕರ ಸಂಘದ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೊಕ್ಕೆಜಾಲು ವಂದಿಸಿದರು. ಪ್ರವೀಣ್ ಕನಿಯಾಲ, ಅಶ್ರಫ್ ಮತ್ರ್ಯ ಕಾರ್ಯಕ್ರಮ ನಿರೂಪಿಸಿದರು.