ನವದೆಹಲಿ: ಯೆಮೆನ್ ಪ್ರಜೆಯೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಲು ಮಧ್ಯವರ್ತಿಗಳ ಗುಂಪು ಶೀಘ್ರದಲ್ಲೇ ಯೆಮೆನ್‌ಗೆ ತೆರಳಲಿದ್ದು, ಆಕೆಯ ಮರಣದಂಡನೆಯನ್ನು ತಪ್ಪಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಹ ಸಚಿವ ವಿ ಮುರಳೀಧರನ್ ನೇತೃತ್ವದಲ್ಲಿ ಸಭೆ ನಡೆಯಿತು. ಚಾರಿಟಿ ಕ್ರಮಗಳನ್ನು ಒಳಗೊಂಡಂತೆ ಸಮನ್ವಯ ಸಾಧಿಸಲು ರಾಯಭಾರ ಕಚೇರಿಗೆ ಸೂಚನೆ ನೀಡಲಾಗಿದೆ.
ಹತ್ಯೆಗೀಡಾದ ತಲಾಲ್ ಅಬ್ದು ಮಹದಿಯ ಕುಟುಂಬವು ಸಮಸ್ಯೆಯನ್ನು ಚರ್ಚಿಸಲು ಸಿದ್ಧ ಎಂದು ಯೆಮೆನ್ ಅಧಿಕಾರಿಗಳು ಹೇಳಿದ್ದಾರೆ. ಯೆಮೆನ್ ಅಧಿಕಾರಿಗಳು ನಿಮಿಷಪ್ರಿಯಾ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದರು ತಲಾಲ್ ಅವರ ಕುಟುಂಬವು 50 ಮಿಲಿಯನ್ ಯೆಮೆನ್ ರಿಯಾಲ್ (ಸುಮಾರು 1.5 ಕೋಟಿ ರೂಪಾಯಿ) ದಂಡ ಅಥವಾ ಪರಿಹಾರ ಧನ ನೀಡಲು ಬೇಡಿಕೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಂಜಾನ್ ಮುಗಿಯುವ ಮುನ್ನವೇ ನಿರ್ಧಾರ ಪ್ರಕಟಿಸಲಾಗುವುದು. ಇದು ಉದ್ದೇಶಪೂರ್ವಕವಲ್ಲದ ತಪ್ಪಾಗಿದೆ ಮತ್ತು ಮೃತ ತಲಾಲ್ ಅವರ ಕುಟುಂಬ ಮತ್ತು ಯೆಮೆನ್ ಜನರು ಅವಳನ್ನು ಕ್ಷಮಿಸುತ್ತಾರೆ ಎಂದು ನಿಮಿಷಪ್ರಿಯಾ ತನ್ನ ತಾಯಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ತಲಾಲ್ ಅಬ್ದುಮಹದಿಯನ್ನು ಜುಲೈ 25, 2017 ರಂದು ಕೊಲ್ಲಲಾಯಿತು. ನಿಮಿಷ ತಲಾಲ್ ಅಬ್ದು ಮಹದಿ ಅವರೊಂದಿಗೆ ಕ್ಲಿನಿಕ್ ನಡೆಸುತ್ತಿದ್ದರು. ಇದಕ್ಕೂ ಮುನ್ನ ತಲಾಲ್ ತನ್ನನ್ನು ವಂಚಿಸಿ ಲಕ್ಷಗಟ್ಟಲೆ ರೂಪಾಯಿ ಲಪಟಾಯಿಸಿದ್ದಾನೆ ಎಂದು ಕುಟುಂಬಕ್ಕೆ ಕಳುಹಿಸಿದ್ದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದು, ದೇಶ ಬಿಟ್ಟು ಹೋಗದೆ ಹಿಂಸಿಸುವುದು, ಲೈಂಗಿಕ ಕಿರುಕುಳದ ಬೆದರಿಕೆ ಹಾಕುವುದು ಮುಂತಾದ ಕ್ರೂರ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ನಿಮಿಚ ಪತ್ರದಲ್ಲಿ ತಿಳಿಸಿದ್ದರುಮ
ಇದರ ಜತೆಗೆ ನಿರಂತರವಾಗಿ ಬಂದೂಕು ತೋರಿಸಿ ಬೆದರಿಸುತ್ತಿದ್ದ ಎಂದು ನಿಮಿಷಾ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. 2014ರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಲೇ ಸ್ವಂತ ಕ್ಲಿನಿಕ್ ಆರಂಭಿಸಲು ನಿಮಿಷ ತಲಾಲ್ ಅವರ ಸಹಾಯ ಕೋರಿದ್ದರು. ನಿಮಿಷಾ ಅವರ ಪತಿ ತಾನು ಎಂದು ತಲಾಲ್ ಹಲವರಿಗೆ ಹೇಳಿದ್ದರು. ಇದಕ್ಕಾಗಿ ನಕಲಿ ಮದುವೆ ಪ್ರಮಾಣ ಪತ್ರವನ್ನೂ ತಯಾರಿಸಿದ್ದರು. ಆಕೆಯ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡು ಆಕೆಯನ್ನು ತನ್ನ ಪತ್ನಿಯನ್ನಾಗಿ ಇರಿಸಿಕೊಳ್ಳುವ ಪ್ರಯತ್ನವೇ ಕೊಲೆಗೆ ಕಾರಣವಾಯಿತು ಎಂದು ನಿಮಿಷಪ್ರಿಯಾ ಹೇಳಿಕೊಂಡಿದ್ದಾರೆ.