HEALTH TIPS

ದೇಶದಾದ್ಯಂತ ಕಲ್ಲಿದ್ದಲು ಕೊರತೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಕೈಗಾರಿಕಾ ಸಂಸ್ಥೆಗಳಿಂದ ಮನವಿ

            ನವದೆಹಲಿ :ಅನಿಯಂತ್ರಿತ ಕ್ಷೇತ್ರಕ್ಕೆ ಕಲ್ಲಿದ್ದಲು ಪೂರೈಕೆ ಕೊರತೆಯ ಹಿನ್ನೆಲೆಯಲ್ಲಿ ಕೈಗಾರಿಕಾ ಸಂಸ್ಥೆಗಳು ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಸ್ತಕ್ಷೇಪಕ್ಕಾಗಿ ಕೋರಿವೆ. ಹೆಚ್ಚಿನ ಬೇಡಿಕೆಯಿಂದಾಗಿ ಕೈಗಾರಿಕೆಗಳು ವಿನಿಮಯ ಕೇಂದ್ರಗಳಿಂದ ಹೆಚ್ಚಿನ ದರಗಳಲ್ಲಿ ವಿದ್ಯುತ್ ಖರೀದಿಸುವ ಅನಿವಾರ್ಯತೆಗೆ ಸಿಲುಕಿವೆ ಎಂದು ಅವು ಹೇಳಿವೆ.ದೇಶದ ವಿದ್ಯುತ್ ಉತ್ಪಾದನಾ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವವನ್ನು ಪಡೆದುಕೊಂಡಿದೆ.ನಿರಂತರ ಕಲ್ಲಿದ್ದಲು ಕೊರತೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟಿನಿಂದ ತತ್ತರಿಸಿರುವ ಉತ್ಪಾದನಾ ವಲಯದ ಪ್ರಮುಖ ವಿಭಾಗ, ಎಂಎಸ್‌ಎಂಇಗಳು ಮತ್ತು ಸ್ವಂತ ಬಳಕೆಗಾಗಿ ಸ್ವಯಂ ವಿದ್ಯುತ್ತನ್ನು ಉತ್ಪಾದಿಸುವ ಕೈಗಾರಿಕೆಗಳು 10 ಕೈಗಾರಿಕಾ ಸಂಘಗಳ ಒಕ್ಕೂಟದ ಮೂಲಕ ಪ್ರಧಾನಿಗಳಿಗೆ ಜಂಟಿ ಅಹವಾಲನ್ನು ಸಲ್ಲಿಸಿವೆ.ದೀರ್ಘಕಾಲೀನ ಇಂಧನ ಕೊರತೆಯು ಸ್ವಂತ ವಿದ್ಯುತ್ ಸ್ಥಾವರಗಳು (ಸಿಪಿಪಿ) ಸೇರಿದಂತೆ ಅಲ್ಯುಮಿನಿಯಂ,ಸಿಮೆಂಟ್,ಉಕ್ಕಿನಂತಹ ಹಲವಾರು ಉದ್ಯಮಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ ಎಂದು ಅಹವಾಲಿನಲ್ಲಿ ತಿಳಿಸಿರುವ ಕೈಗಾರಿಕಾ ಸಂಸ್ಥೆಗಳು,ಪ್ರಚಲಿತ ಸ್ಥಿತಿಯಲ್ಲಿ ಕೈಗಾರಿಕೆಗಳು,ವಿಶೇಷವಾಗಿ ನಿರಂತರ ಉತ್ಪಾದನಾ ಸ್ಥಾವರಗಳು ವಿನಿಮಯ ಕೇಂದ್ರಗಳಿಂದ ವಿದ್ಯುತ್ ಅನ್ನು ಖರೀದಿಸುವ ಅನಿವಾರ್ಯತೆಗೆ ಸಿಲುಕಿವೆ ಮತ್ತು ಇದು ವಿದ್ಯುತ್ತಿಗೆ ಬೇಡಿಕೆ ಹೆಚ್ಚಲು ಹಾಗೂ ವಿನಿಮಯ ಕೇಂದ್ರಗಳ ವಿದ್ಯುತ್ ದರಗಳು ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ ಎಂದು ಹೇಳಿವೆ.

           ಹಾಲಿ ವಿತ್ತವರ್ಷದಲ್ಲಿ ಸಿಪಿಪಿಗಳು,ಉಕ್ಕು,ಸಿಮೆಂಟ್,ಸ್ಪಾಂಜ್ ಅಯರ್ನ್ನಂತಹ ಕ್ಷೇತ್ರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಶೇ.32ರವರೆಗೆ ಕಡಿತವುಂಟಾಗಿದೆ ಎಂದಿರುವ ಅಹವಾಲು,ಸ್ಥಿತಿ ಎಷ್ಟೊಂದು ಹದಗೆಟ್ಟಿದೆಯೆಂದರೆ ಹಲವಾರು ಕೈಗಾರಿಕೆಗಳಿಗೆ ಉತ್ಪಾದನೆಗಳನ್ನು ಕಡಿತಗೊಳಿಸುವದು ಅಥವಾ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಬಹುದು. ಕಲ್ಲಿದ್ದಲು ಖರೀದಿಯಲ್ಲಿನ ಅಡಚಣೆಗಳು ತಯಾರಿಕೆ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಹುದು ಮತ್ತು ಇದು ದೇಶದ ಶ್ರೀಸಾಮಾನ್ಯರನ್ನೂ ಬಾಧಿಸಬಹುದು ಎಂದು ತಿಳಿಸಿದೆ.ಜನವರಿ-ಮಾರ್ಚ್ ಅವಧಿಯಲ್ಲಿ ವಿದ್ಯುತ್ ಮತ್ತು ವಿದ್ಯುತೇತರ ಕ್ಷೇತ್ರಗಳ ನಡುವೆ ಕಲ್ಲಿದ್ದಲಿನ ಸಮಾನ ಹಂಚಿಕೆಯನ್ನು ಸಾಧಿಸಿದ್ದರೆ ಬೇಸಿಗೆಯ ಮುನ್ನ ಎಲ್ಲ ಕ್ಷೇತ್ರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯಾಗುತ್ತಿತ್ತು ಮತ್ತು ಸಿಪಿಪಿ ಘಟಕಗಳಿಂದ ಉತ್ಪಾದನೆಯಿಂದಾಗಿ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡವು ಕಡಿಮೆಯಾಗುತ್ತಿತ್ತು ಎಂದು ಅಹವಾಲಿನಲ್ಲಿ ಬೆಟ್ಟು ಮಾಡಲಾಗಿದೆ.

           ಕೋವಿಡ್ ನಂತರ ಆರ್ಥಿಕತೆಯಲ್ಲಿ ಉತ್ಕರ್ಷದಿಂದಾಗಿ ವಿದ್ಯುತ್ತಿಗೆ ಹೆಚ್ಚಿರುವ ಬೇಡಿಕೆ,ಬೇಸಿಗೆ ಬೇಗ ಆರಂಭವಾಗಿರುವುದು,ಅನಿಲ ಮತ್ತು ಆಮದು ಕಲ್ಲಿದ್ದಲು ಬೆಲೆಗಳಲ್ಲಿ ಏರಿಕೆ ಮತ್ತು ಕರಾವಳಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತದಂತಹ ಹಲವಾರು ಅಂಶಗಳು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎ.ಕೆ.ಜೈನ್ ಸಮಜಾಯಿಷಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries