ಕಾಸರಗೋಡು: ಕೇರಳ ರಾಜ್ಯ ಬಾರ್ಬರ್ಸ್-ಬ್ಯೂಟಿಶಿಯನ್ಸ್ ಅಸೋಸಿಯೇಶನ್‍ನ 53ನೇ ವಾರ್ಷಿಕ ಕಾಸರಗೋಡು ತಾಲೂಕು ಸಮ್ಮೇಳನ ಕೋ-ಆಪರೇಟಿವ್ ಬ್ಯಾಂಕ್ ಹಾಲ್‍ನಲ್ಲಿ ನಡೆಯಿತು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ. ಎಂ. ಮುನೀರ್ ಸಮ್ಮೇಳನ ಉದ್ಘಾಟಿಸಿದರು.
ತಾಲೂಕು ಘಟಕ ಅಧ್ಯಕ್ಷ ಗೋಪಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎನ್. ಸೇತು ಪ್ರಧಾನ ಭಾಷಣ ಮಾಡಿದರು. ಮುಖಂಡರಾದ ಎಂ. ಪಿ ಕುಮಾರನ್, ಕೆ. ಗೋಪಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ಯಾಮ ನಾಯರ್, ಸುನೀತಾ ಗುಲಾಲ್, ಡಿ. ಅರುಣ್ ಕುಮಾರ್, ಎನ್. ಆರ್. ಕೃಷ್ಣನ್ ಮತ್ತು ಗೋಪಾಲನ್ ಕುಂಟಾರ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಅಧ್ಯಕ್ಷ ಮಣಿ ಆಲಂಪಾಡಿ ಸ್ವಾಗತಿಸಿದರು. ಬಿ. ಸತ್ಯನಾರಾಯಣ ವಂದಿಸಿದರು. ಕಾರ್ಯಕ್ರಮಕ್ಕೆ ಮೊದಲು ತಾಲೂಕು ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳನ್ನೊಳಗೊಂಡ ಮೆರವಣಿಗೆ ನಗರದಲ್ಲಿ ನಡೆಯಿತು.