ಕಾಸರಗೋಡು: ಸಿಹಿನೀರಿನ ನವಕೇರಳಂ ಅಭಿಯಾನದ ಅಂಗವಾಗಿ ಕಾಸರಗೋಡು ನಗರಸಭೆಯು ಅಡ್ಕ ಬಯಲು ಮತ್ತು ಬೀರಂತಬಯಲು ಹೊಳೆಗಳ ದಡದಲ್ಲಿ ಜಲ ನಡಿಗೆಯನ್ನು ಹಮ್ಮಿಕೊಂಡಿತು. ಜಲಮೂಲಗಳಿಗೆ ತ್ಯಾಜ್ಯವನ್ನು ಹಾಕದಂತೆ ನೀರಿನ ನೈರ್ಮಲ್ಯದಲ್ಲಿ ಸುಸ್ಥಿರತೆಯನ್ನು ಸಾಧಿಸುವುದು ಯೋಜನೆಯ ಉದ್ದೇಶವಾಗಿದೆ.
ಕಾಸರಗೋಡು ನಗರಸಭೆ ಅಧ್ಯಕ್ಷ ಅಡ್ವ ವಿ.ಎಂ.ಮುನೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭೆ ಕಾರ್ಯದರ್ಶಿ ಎಸ್. ಬಿಜು ವರದಿ ಮಂಡಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆರ್.ರೀತಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕಾಡ್, ನಿರ್ವಹಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಯಾನ ಹನೀಫ್, ಜಿಲ್ಲಾ ನೈರ್ಮಲ್ಯ ಮಿಷನ್ ಕೋ-ಆರ್ಡಿನೇಟರ್ ಕೆ. ಲಕ್ಷ್ಮಿ ಹಾಗೂ ಹಸಿರು ಕೇರಳ ಮಿಷನ್ ಸಂಯೋಜಕ ಸುಬ್ರಮಣಿಯನ್ ಮಾತನಾಡಿದರು. ಯೋಜನೆಯ ಭಾಗವಾಗಿ ಪ್ರತಿ ವಾರ್ಡ್‍ನಲ್ಲಿ ಜಲಸಭಾ ಸಭೆ ನಡೆಸಲಿದೆ. ಹೊಳೆ ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಮತ್ತು ಜೈವಿಕ ತ್ಯಾಜ್ಯ ಸಂಗ್ರಹಣೆ ಮತ್ತು ಅನುಸರಣಾ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಜಲ ಸಭೆ ಚರ್ಚಿಸಿ ನಿರ್ಧರಿಸುತ್ತದೆ.