ಬದಿಯಡ್ಕ: ಏಪ್ರಿಲ್ 30ರಂದು ಬೆಳ್ಳೂರು ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುವ ಲಕ್ಷಾರ್ಚನೆ ಹಾಗೂ 6ನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಗುರುವಾರ ಮಠದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕಲ್ಲಗ ಚಂದ್ರಶೇಖರ ರಾವ್, ಗಂಗಾಧರ ಬಲ್ಲಾಳ್ ಅಡ್ವಳ, ಹರೀಶ್ ಗೋಸಾಡ, ಹರಿನಾರಾಯಣ ನಡ್ವಂತಿಲ್ಲಾಯ, ಅರವಿಂದಕುಮಾರ್ ಅಲೆವೂರಾಯ, ದಯಾನಂದ ಕಳುವಾಜೆ ಪ್ರವೀಣ್ ನೆಕ್ರಾಜೆ ಮುಂತಾದವರು ಉಪಸ್ಥಿತರಿದ್ದರು.