ತಿರುವನಂತಪುರ: ರಾಜ್ಯದಲ್ಲಿ ಇಂಧನ ತೆರಿಗೆ ಇಳಿಕೆ ಮಾಡುವುದಿಲ್ಲ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಪುನರುಚ್ಚರಿಸಿದ್ದಾರೆ. ಕೇಂದ್ರದ ತೆರಿಗೆ ಬೆಲೆ ಕಡಿಮೆಯಾದರೆ ರಾಜ್ಯವೂ ಇಳಿಕೆ ಮಾಡಬಹುದು ಎನ್ನಲಾಗುತ್ತಿದೆ. ತೆರಿಗೆ ಕಡಿಮೆಯಾದರೆ 17,000 ಕೋಟಿ ರೂ. ಕೊರತೆಯಾಗಲಿದೆ. ಹಾಗಾಗಿ ಸದ್ಯದ ಆದಾಯವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೆ.ಎನ್.ಬಾಲಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಕ್ಕೆ ನೀಡಬೇಕಾದ ಬಾಕಿಯನ್ನು ಕೇಂದ್ರ ನೀಡುತ್ತಿಲ್ಲ ಎಂದು ಬಾಲಗೋಪಾಲ್ ಅವರು
ಆರೋಪಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಕೇಂದ್ರ ವಿಧಿಸುವ ತೆರಿಗೆಯಲ್ಲಿ ಕೇಂದ್ರ ಪಾಲು ಕಡಿಮೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಬಾಲಗೋಪಾಲ್ ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಇಂಧನ ತೆರಿಗೆ ಇಳಿಸಿದಾಗ ಕೇರಳದಲ್ಲಿ ಇಳಿಕೆ ಮಾಡಬೇಕೆಂಬ ಬೇಡಿಕೆ ಬಂದಿತ್ತು. ಆದರೆ ರಾಜ್ಯ ಅದನ್ನು ತಿರಸ್ಕರಿಸಿತ್ತು. ಇಂಧನ ತೆರಿಗೆಯನ್ನು ಕೇಂದ್ರ ಕಡಿತಗೊಳಿಸಿದ ಬೆನ್ನಲ್ಲೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆಯಾಗಿತ್ತು. ಕೇರಳ, ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳು ಇನ್ನೂ ಬೆಲೆ ಕಡಿತಕ್ಕೆ ಸಿದ್ಧವಾಗಿಲ್ಲ.