ಪೆರ್ಲ: ಸುದೀರ್ಘ 36 ವರ್ಷಗಳ ಸೇವೆಯ ಬಳಿಕ ಎಣ್ಮಕಜೆ ಪಂ.ಕಾರ್ಯದರ್ಶಿಯಾಗಿ ನಿವೃತ್ತರಾದ ಅಚ್ಚುತ್ತ ಮಣಿಯಾಣಿ ಅವರನ್ನು ಬೀಳ್ಕೊಡಲಾಯಿತು. ಪಂಚಾಯತಿನ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿ ಕಳೆದ ಕಳೆದ ಜುಲೈ ತಿಂಗಳಿನಿಂದ ಎಣ್ಮಕಜೆ ಪಂಚಾಯತು ಕಾರ್ಯದರ್ಶಿಯಾಗಿ ಸೇವೆಗೈಯುತ್ತಿದ್ದರು. ಪಂಚಾಯತು ಸಭಾಂಗಣದಲ್ಲಿ ಜರಗಿದ ವಿದಾಯ ಕೂಟ ಸಮಾರಂಭದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ಇಂದಿರಾ,ರಾಮಚಂದ್ರ,ನರಸಿಂಹ ಪೂಜಾರಿ, ರೂಪವಾಣಿ ಆರ್. ಭಟ್, ರಮ್ಲ,ಕುಸುಮಾವತಿ, ಉಷಾ, ಪಂ.ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಸೀನಿಯರ್ ಕ್ಲರ್ಕ್ ಕರುಣಾಕರನ್ ಸ್ವಾಗತಿಸಿ ನವಾಸ್ ವಂದಿಸಿದರು.