ಕಾಸರಗೋಡು: ಅಡುಗೆ ಅನಿಲ ಬೆಲೆಏರಿಕೆ ಖಂಡಿಸಿ ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರಧಾನ ಅಂಚೆ ಕಚೇರಿ ಎದುರು ಬುಧವಾರ ಧರಣಿ ನಡೆಸಲಾಯಿತು.
ಸಂಘಟನೆ ಕೇರಳ ರಾಜ್ಯ ಘಟಕ ಅಧ್ಯಕ್ಷ ಜೆ.ಜಯಪಾಲ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ಲಾ ತಾಜ್ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಉದ್ದಿಮೆಯನ್ನು ಸಂರಕ್ಷಿಸಬೇಕು, ಅಡುಗೆ ಅನಿಲ ಬೆಲೆಯೇರಿಕೆ ತಡೆಗಟ್ಟಬೇಕು, ಆನ್‍ಲೈನ್ ಮಾಫಿಯಾಗೆ ತಡೆಯೊಡ್ಡಬೇಕು, ನಿತ್ಯೋಪಯೋಗಿ ಸಾಮಗ್ರಿ ಬೆಲೆಯೇರಿಕೆ ತಡೆಗಟ್ಟಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.
ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಮುಖಂಡರಾದ ರಾಜನ್ ಕಲಕ್ಕರ, ಮಹಮ್ಮದ್ ಗಜಾಲಿ, ಅಜೇಶ್ ನುಳ್ಳಿಪಾಡಿ, ಸತ್ಯನಾಥನ್ ಬೋವಿಕಾನಂ, ವಸಂತಕುಮಾರ್ ನೇತೃತ್ವ ವಹಿಸಿದ್ದರು.