ತಿರುವನಂತಪುರ: ಗುಜರಾತ್ ಮಾದರಿ ಅಭಿವೃದ್ಧಿ ಅಧ್ಯಯನಕ್ಕೆ ಕೇರಳ ಮುಖ್ಯ ಕಾರ್ಯದರ್ಶಿ ವಿ.ಪಿ. ಸಂತೋಷ ನಾಳೆ ಗುಜರಾತ್ ಗೆ ತೆರಳಲಿದ್ದಾರೆ. ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಸಮನ್ವಯತೆಯನ್ನು ಅಧ್ಯಯನ ಮಾಡಲು ಗುಜರಾತ್ ಭೇಟಿ ನಡೆಯಲಿದೆ. ಇದಕ್ಕಾಗಿ ಸಿದ್ಧಪಡಿಸಿರುವ ಡ್ಯಾಶ್ ಬೋರ್ಡ್ ಪ್ಲಾನ್ ಬಗ್ಗೆ ತಿಳಿದುಕೊಳ್ಳುವುದು ಅ|ಧ್ಯಯನ ಪ್ರವಾಸದ ಮುಖ್ಯ ಉದ್ದೇಶವಾಗಿದೆ.
ಗುಜರಾತ್ ಮುಖ್ಯಮಂತ್ರಿಯ ಡ್ಯಾಶ್‍ಬೋರ್ಡ್ ವ್ಯವಸ್ಥೆಯು ಅಧಿಕಾರಶಾಹಿ ಸುಧಾರಣೆ, ಪ್ರಮುಖ ಯೋಜನೆಗಳ ಅನುಷ್ಠಾನ, ಸಿಬ್ಬಂದಿ ಕೆಲಸದ ಸಮನ್ವಯ ಮತ್ತು ವೈಯಕ್ತಿಕ ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತದೆ. ಇದು ದೇಶದ ಅತ್ಯಂತ ಗಮನಾರ್ಹ ಯೋಜನೆಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲಾಗಿದೆ. ಮುಖ್ಯಮಂತ್ರಿಗಳು ತಮ್ಮ ಕಚೇರಿ ಅಥವಾ ಮನೆಯಿಂದಲೇ ನೇರವಾಗಿ ಅಧಿಕಾರಿಗಳ ಯೋಜನೆಗಳು, ಕಾರ್ಯಚಟುವಟಿಕೆಗಳು ಮತ್ತಿತರ ವಿಷಯಗಳನ್ನು ಪರಿಶೀಲಿಸುವ ವ್ಯವಸ್ಥೆ ಇದಾಗಿದೆ.
ಪ್ರಧಾನಿಯವರೊಂದಿಗಿನ ಭೇಟಿಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರಸ್ತಾಪಿಸಿದ್ದರು. ನಂತರ ಮುಖ್ಯಮಂತ್ರಿಗಳು ಯೋಜನೆಯ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಇದರ ಆಧಾರದ ಮೇಲೆ ರಾಜ್ಯ ಮುಖ್ಯ ಕಾರ್ಯದರ್ಶಿ ನಾಳೆ ಗುಜರಾತ್ ಗೆ ತೆರಳಲಿದ್ದು, ಅಲ್ಲಿಯ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಮತ್ತು ಮುಖ್ಯ ಕಾರ್ಯದರ್ಶಿ ಕಚೇರಿಯ ಉಸ್ತುವಾರಿ ಹೊತ್ತಿರುವ ಐಎಎಸ್ ಅಧಿಕಾರಿ ಉಮೇಶ್ ಅವರಿಗೆ ಸರ್ಕಾರ ಪ್ರಯಾಣ ಪರವಾನಗಿ ನೀಡಿದೆ. ಅಧಿಕಾರಿಗಳನ್ನು ಭೇಟಿ ಮಾಡಿ ವಾರದೊಳಗೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ.