ಬದಿಯಡ್ಕ: ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಿದ ಶ್ರೀಈಶ್ವರಾನಂದ ಭಾರತೀ ಸ್ವಾಮೀಜಿ ಹಯರ್ ಸೆಕೆಂಡರಿ ಶಾಲೆ ಎಡನೀರು ಇದರ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಇಂದು ಬೆಳಿಗ್ಗೆ 9 ಕ್ಕೆ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಾರ್ಕಳ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ವಿಶೇಷ ಅಭ್ಯಾಗತರಾಗಿ ಉಪಸ್ಥಿತರಿರುವರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಉಪಸ್ಥಿತರಿರುವರು.
ಬಳಿಕ ಎಡನೀರು ಮಠದ ಸಭಾಂಗಣದಲ್ಲಿ ನಡೆಯುವ ಗಡಿ ಕನ್ನಡ ಸಾಂಸ್ಕøತಿಕ ಉತ್ಸವವನ್ನು ಶಾಸಕ ಸುನಿಲ್ ಕುಮಾರ್ ಉದ್ಘಾಟಿಸುವರು. ಎಡನೀರು ಶ್ರೀಗಳು ಉಪಸ್ಥಿತರಿರುವರು. ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಡಾ.ಟಿ.ಶ್ಯಾಮ ಭಟ್ ಉಪಸ್ಥಿತರಿರುವರು. ಚಾಲನಾ ಸಮಾರಂಭದ ಬಳಿಕ 11 ರಿಂದ 12.30ರ ವರೆಗೆ ಮಂಜೇಶ್ವರದ ನಾಟ್ಯನಿಲಯಂ ಕೇಂದ್ರದ ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯವೃಂದದವರಿಂದ ಗೀತ ನೃತ್ಯ-"ಬಾರಿಸು ಕನ್ನಡ ಡಿಂಡಿಮವ" ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ. ಅಪರಾಹ್ನ 1.30 ರಿಂದ 3ರ ವರೆಗೆ ಗಾಯಕ ಕಿಶೋರ್ ಪೆರ್ಲ ಮತ್ತು ತಂಡದವರಿಂದ ಕನ್ನಡ ಭಾವಸಂಗಮ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3 ರಿಂದ 5ರ ವರೆಗೆ ಸಮಾರೋಪ ಸಮಾರಂಭ ಮತ್ತು ಕನ್ನಡ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಡಾ|.ಸಿ.ಸೋಮಶೇಖರ್ ಉಪಸ್ಥಿತರಿರುವರು. ಸಾಹಿತಿ ಕೆ.ಸಿ.ಶಿವಪ್ಪ ಸಮಾರೋಪ ಭಾಷಣ ಮಾಡುವರು. ಸಂಜೆ 5 ರಿಂದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮತ್ತು ಬಳಗದವರಿಂದ ವಿಶ್ವಾಮಿತ್ರ ಮೇನಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.