ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಸೌರಮಾನ ಯುಗಾದಿಯ ಹಬ್ಬವನ್ನು ಹೊಸ ವರ್ಷಾಚರಣೆ ವಿಷುಪರ್ವದಂದು ವಿಶೇಷ ಪೂಜಾ ಕೈಂಕರ್ಯದೊಂದಿಗೆ ಪಂಚಾಂಗ ಪೂಜಾ ಸಹಿತ ಪಂಚಾಂಗ ಶ್ರವಣವನ್ನು ಸಾಮೂಹಿಕವಾಗಿ ಬಹಳ ಶ್ರದ್ಧಾಭಕ್ತಿ ಸಂಭ್ರಮಗಳಿಂದ ನೆರವೇರಿಸಲಾಯಿತು.
ಶ್ರೀ ಕ್ಷೇತ್ರದಲ್ಲಿ ವಿಷುಕಣಿ ಪರ್ವದಂದು ಪವಿತ್ರಪಾಣಿ ಹಾಗೂ ಪ್ರಧಾನ ಅರ್ಚಕ ವೇ.ಮೂ. ಯನ್ ವಾಸುದೇವ ಭಟ್ ಅವರ ನೇತೃತ್ವದೊಂದಿಗೆ ವಿ ಶಿವರಾಜ ನೇತೃತ್ವದಲ್ಲಿ ವಿಷು ವಿಶೇಷ ಪೂಜೆ ಪಂಚಾಂಗ ಪುಸ್ತಕಕ್ಕೆ ಸಲ್ಲಿಸಿ ಸಾಮೂಹಿಕವಾಗಿ ಪಂಚಾಂಗ ಶ್ರವಣವನ್ನು ಮಾಡಲಾಯಿತು. ಈ ಸಂದರ್ಭ ಸಾಮೂಹಿಕ ಭಜನಾ ಸೇವೆ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಧಿಯಲ್ಲಿ ಹಾಗೂ ಪರಿವಾರ ದೇವರುಗಳ ಸನ್ನಿಧಿಯಲ್ಲಿ ವಿಶೇಷ ಸೇವೆಗಳನ್ನು ಮಾಡಲಾಯಿತು. ಶ್ರೀ ಸದಾಶಿವ ದೇವರಿಗೆ ಪರ್ವದ ಪ್ರಯುಕ್ತ ಕ್ಷೀರ ದಧಿ ಘೃತ ಮಧು ಶರ್ಕರಗಳೆಂಬ '5' ದ್ರವ್ಯಗಳಿಂದ ಪಂಚಾಂಮೃತಾಭಿಷೇಕವನ್ನು ಸಲ್ಲಿಸಿ ಜಲ ಗಂಧ ಪುಷ್ಪ ನಾಳಿಕೇರ ಜಲಧಾರೆಯೊಂದಿಗೆ ರುದ್ರಾಭಿಷೇಕದ ವಿಶೇಷ ಸೇವೆಯನ್ನು ಸಲ್ಲಿಸಲಾಯಿತು.