ನವದೆಹಲಿ: ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸುವುದರಿಂದ ಉದ್ಯೋಗಿಗಳ ಅಶಾಂತಿ ಮತ್ತು ಬಹು ವ್ಯಾಜ್ಯಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮೀಸಲಾತಿ ನೀತಿಯು ಸಂವಿಧಾನ ಮತ್ತು ಈ ನ್ಯಾಯಾಲಯ ರೂಪಿಸಿದ ಕಾನೂನಿಗೆ ಅನುಗುಣವಾಗಿದೆ ಎಂದು ತಿಳಿಸಿದೆ.
"ಬಡ್ತಿ ಮೀಸಲಾತಿ ರದ್ದುಗೊಳಿಸಿದರೆ Sಅ/Sಖಿ ನೌಕರರಿಗೆ ನೀಡಲಾದ ಬಡ್ತಿ ಮೀಸಲಾತಿಯ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಇದು Sಅ ಮತ್ತು Sಖಿ ನೌಕರರನ್ನು ಹಿಮ್ಮೆಟ್ಟಿಸಲು ಕಾರಣವಾಗಬಹುದು, ಪಿಂಚಣಿ ಮರು-ನಿಗದಿ ಸೇರಿದಂತೆ ಅವರ ವೇತನವನ್ನು ಮರು-ನಿಗದಿಗೊಳಿಸುವಿಕೆಗೆ ಕಾರಣವಾಗಬಹುದು. ಈ ಮಧ್ಯೆ ನಿವೃತ್ತರಾಗಿರುವ ಅನೇಕ ಉದ್ಯೋಗಿಗಳು, ಅವರಿಗೆ ಪಾವತಿಸಿದ ಹೆಚ್ಚುವರಿ ಸಂಬಳ/ಪಿಂಚಣಿ ವಾಪಸ್ ಪಡೆಯಬೇಕಾಗುತ್ತದೆ. ಇದು ಬಹು ವ್ಯಾಜ್ಯಗಳ ಸೃಷ್ಟಿಗೆ ಮತ್ತು ನೌಕರರ ಅಶಾಂತಿಗೆ ಕಾರಣವಾಗುತ್ತದೆ" ಕೇಂದ್ರ ಹೇಳಿದೆ.
ಬಡ್ತಿ ಮೀಸಲಾತಿಯನ್ನು ಸಮರ್ಥಿಸಿಕೊಂಡ ಕೇಂದ್ರ, ಭಾರತೀಯ ಒಕ್ಕೂಟದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯ ಅಸಮರ್ಪಕವಾಗಿದೆ ಮತ್ತು ಬಡ್ತಿ ಮೀಸಲಾತಿಯಿಂದ ಆಡಳಿತಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ಪ್ರತಿಪಾದಿಸಿದೆ.
ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಯ ಮೂಲಕ ಪ್ರತಿ ಅಧಿಕಾರಿಯ ಕೆಲಸ, ವೈಯಕ್ತಿಕ ಗುಣಲಕ್ಷಣಗಳು ಮತ್ತು ಕ್ರಿಯಾತ್ಮಕ ಸಾಮರ್ಥ್ಯದ ಮೌಲ್ಯಮಾಪನ ಮಾಡುವ ಮೂಲಕ ಆಡಳಿತಾತ್ಮಕ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಹೇಳಿದೆ.