ಕೊಚ್ಚಿ: ಸಿಲ್ವರ್ ಲೈನ್ ಗೆ ಸರ್ವೇಕಲ್ಲು ಹಾಕುವ ಮೂಲಕ ಜನರ ಶಾಂತಿ ಕದಡುವ ಯಾವುದೇ ಪ್ರಯತ್ನ ನಡೆಯದಂತೆ ತಡೆಯಲು ಮುಖ್ಯಮಂತ್ರಿ ಮುಂದಾಗಬೇಕು ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿರುವರು. ಪ್ರತಿದಿನ ಸ್ಥಳೀಯರು ಮತ್ತು ಪೋಲೀಸರ ನಡುವೆ ಘರ್ಷಣೆಗಳು ನಡೆಯುತ್ತಿವೆ. ಈ ಪರಿಸ್ಥಿತಿ ರಾಜ್ಯದ ಪ್ರಗತಿಗೆ ಪೂರಕವಲ್ಲ. ಮುಖ್ಯ ಕಾರ್ಯದರ್ಶಿಯವರ ಗುಜರಾತ್ ಭೇಟಿಯ ಬಗ್ಗೆಯೂ ಮುರಳೀಧರನ್ ಪ್ರಸ್ತಾಪಿಸಿದರು.
ಕೇರಳ ಪೋಲೀಸರು ಆಕ್ರಮಣಕಾರರು ಮತ್ತು ಗೂಂಡಾಗಳಿಗಾಗಿ ಕೆಲಸ ಮಾಡುತ್ತಾರೆ. ಪೋಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು. ಪೋಲೀಸರು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಲು ಸರಕಾರ ಅವಕಾಶ ನೀಡಬೇಕು. ಕೆ-ರೈಲ್ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಯೋಜನೆ ಜಾರಿಯಾಗುವುದಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದರು. ತಂತ್ರಜ್ಞರೂ ಇದನ್ನೇ ಹೇಳುತ್ತಾರೆ. ಇನ್ನೂ ಕೆಲವರು ಅಲ್ಪ ಬೆಲೆಗೆ ಭೂಮಿ ಪಡೆಯಲು ಸರ್ವೇಕಲ್ಲು ಹಾಕುವ ಮೂಲಕ ವಂಚನೆ ನಡೆಸುತ್ತಿದ್ದಾರೆ ಎಂಬ ಶಂಕೆ ಇದೆ ಎಂದರು.
ಚರ್ಚೆಗೆ ಬಂದವರಿಗೂ ಸರ್ವೇಕಲ್ಲು ಹಾಕುವ ಪ್ರಕ್ರಿಯೆ ಏಕೆ ನಡೆದಿದೆ ಎಂಬುದು ಅರ್ಥವಾಗಲಿಲ್ಲ. ಬೆದರಿಸಿ ತಪೆÇ್ಪಪ್ಪಿಗೆಯನ್ನು ಪಡೆಯಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಾಮಾಜಿಕ ಪರಿಣಾಮದ ಅಧ್ಯಯನಕ್ಕೆ ಕಲ್ಲು ಹಾಕಿದ್ದು ಏಕೆ ಎಂದು ಪ್ರಶ್ನಿಸಿದರು.
ಗುಜರಾತ್ ಭಾರತದೊಳಗಿನ ಒಂದು ಸ್ಥಳವಾಗಿದೆ. ಮುಖ್ಯ ಕಾರ್ಯದರ್ಶಿ ಗುಜರಾತ್‍ಗೆ ಅಧ್ಯಯನಕ್ಕೆ ತೆರಳುತ್ತಿರುವುದು ಸಂತಸದ ಸಂಗತಿ. ಪ್ರತಿಪಕ್ಷಗಳು ಇದನ್ನು ಅಹಿತಕರ ಸಂಗತಿಯಾಗಿ ನೋಡುತ್ತವೆ. ಜನರನ್ನು ಹೊರದೂಡದೆ ಅಭಿವೃದ್ಧಿ ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದನ್ನು ಗುಜರಾತ್ ನಿಂದ ಕಲಿಯಬಹುದು ಎಂದು ವಿ.ಮುರಳೀಧರನ್ ಹೇಳಿದರು.