ಹೈದರಾಬಾದ್: ಹೈದ್ರಾಬಾದ್ ನಲ್ಲಿ ಬೆಟ್ಟಿಂಗ್ ದಂಧೆಕೋರರನ್ನು ಪೊಲೀಸರು ಬೇಟೆ ಆಡಿದ್ದಾರೆ. ಐಪಿಎಲ್ ಪಂದ್ಯಕ್ಕಾಗಿ ಹಣ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿದ ನಗರ ಪೊಲೀಸರು ಮೂವರು ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಅವರ ಬಳಿಯಿದ್ದ 1.20 ಲಕ್ಷ ರೂಪಾಯಿ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಗುಪ್ತ ಮಾಹಿತಿಯ ಮೇರೆಗೆ, ಕಮಿಷನರ್ ಟಾಸ್ಕ್ ಫೋರ್ಸ್, ದಕ್ಷಿಣ ವಲಯ ತಂಡವು ಫಲಕ್ನುಮಾ ಪೊಲೀಸರೊಂದಿಗೆ ಫಲಕ್ನುಮಾದ ನವಾಬ್ ಸಾಬ್ ಕುಂಟಾದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು, ಶಿರಾಜ್ ತಲೀಬ್(ಬುಕಿ), ಸೈಯದ್ ಘೌಸ್(ಪಂಟರ್) ಮತ್ತು ಶೇಕ್ ಫಸಿಯುಲ್ಲಾ(ಪಂಟರ್) ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕಳೆದ ಮಂಗಳವಾರ ರಾತ್ರಿ IPಐ-2022 ಪಂದ್ಯಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗಳನ್ನು ಸ್ವೀಕರಿಸುತ್ತಿದ್ದಾಗ ಪೊಲೀಸರು ಈ ದಾಳಿ ಮಾಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳೊಂದಿಗೆ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಫಲಕ್ನುಮಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.