ಶ್ರೀನಗರ: ಆನ್ ಲೈನ್ ನಿಯತಕಾಲಿಕೆಯೊಂದರಲ್ಲಿ ದೇಶದ್ರೋಹ ಲೇಖನ ಬರೆದಿದ್ದ, ಕಾಶ್ಮೀರ ವಿವಿಯ ಪಿಹೆಚ್ ಡಿ ವಿದ್ವಾಂಸನನ್ನು ರಾಜ್ಯ ತನಿಖಾ ಸಂಸ್ಥೆ ಬಂಧಿಸಿದೆ.
ಅಬ್ದುಲ್ ಅಲಾ ಫಜಿಲಿ ಬಂಧನಕ್ಕೊಳಗಾಗಿರುವ ಪಿಹೆಚ್ ಡಿ ವಿದ್ವಾಂಸನಾಗಿದ್ದು, ರಾಷ್ಟ್ರವಿರೋಧಿ ಜಾಲ ಹಾಗೂ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟುವ ಕಾರ್ಯಾಚರಣೆಯ ಭಾಗವಾಗಿ ಎಸ್ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಯುಎಪಿಎ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ಆಧಾರದಲ್ಲಿ ಎಸ್ಐಎ ಶೋಧಕಾರ್ಯಾಚರಣೆ ನಡೆಸಿತ್ತು. ಬಂಧನಕ್ಕೊಳಗಾಗಿರುವ ಫಾಜಿಲಿ ಜೊತೆಗೆ ದಿ ಕಾಶ್ಮೀರ್ ವಾಲ ಎಂಬ ಡಿಜಿಟಲ್ ನಿಯತಕಾಲಿಕೆಯ ಸಂಪಾದಕ ಹಾಗೂ ಇನ್ನಿತರರನ್ನು ಬಂಧಿಸಿದ್ದಾರೆ.
ಶೋಧಕಾರ್ಯಾಚರಣೆ ವೇಳೆ ಎಸ್ಐಎ ಕಂಪ್ಯೂಟರ್ ನಲ್ಲಿದ್ದ ಪ್ರಮುಖ ಫೈಲ್ ಗಳು, ಲ್ಯಾಪ್ ಟಾಪ್ ಹಾಗೂ ಇನ್ನಿತರ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.