ಉಪ್ಪಳ: ಕೇರಳ ಸ್ಟೇಟ್ ಬ್ಯೂಟಿ ಅಸೋಸಿಯೇಷನ್ ಉಪ್ಪಳ ಬ್ಲಾಕ್ ಸಮ್ಮೇಳನ ಇತ್ತೀಚೆಗೆ ತ್ರಿಭುವನ ಹೋಟೆಲಲ್ಲಿ ಜರಗಿತು. ಉದ್ಘಾಟನೆಯನ್ನು ಜಿಲ್ಲಾ ಕಾರ್ಯದರ್ಶಿ ಸುನೀತಾ ಕುಲಾಲ್ ನೆರವೇರಿಸಿದರು. ಜಿಲ್ಲಾ ಸಂಯೋಜಕ ಸತ್ಯನಾರಾಯಣ ಬದಿಯಡ್ಕ, ಬ್ಲಾಕ್ ಅಧ್ಯಕ್ಷ ಯೋಗಿತಾ ರಾಣಿ, ಬ್ಲಾಕ್ ಕಾರ್ಯದರ್ಶಿ ಶಕೀಲಾ ಬಂಗೇರ ಮಾತಾನಾಡಿದರು. ಈ ಸಂದರ್ಭದಲ್ಲಿ ಹೊಸ ಪದಾಧಿಕಾರಿಯಾಗಿ ಬ್ಲಾಕ್ ಅ|ಧ್ಯಕ್ಷೆ ಆಯಿಷಾ, ಕಾರ್ಯದರ್ಶಿಯಾಗಿ ಸವಿತಾ ಸುರೇಶ್, ಖಜಾಂಜಿಯಾಗಿ ಶಶಿರಾಜ್ ಅವರನ್ನು ಆಯ್ಕೆಮಾಡಲಾಯಿತು. ಖಜಾಂಜಿ ಸುಪ್ರಭಾ ಶೆಟ್ಟಿ ವಂದಿಸಿದರು.