ಕೊಚ್ಚಿ: ಸಿಪಿಎಂ ಪಕ್ಷದ ಸಮ್ಮೇಳನದ ಅಂಗವಾಗಿ ಆಯೋಜನೆಗೊಂಡಿರುವ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಹಿರಿಯ ಕಾಂಗ್ರೆಸ್ ನಾಯಕ ಕೆವಿ ಥಾಮಸ್ ಇಂದು ಕಣ್ಣೂರಿಗೆ ಆಗಮಿಸುವರು. ನಾಳೆ ವಿಚಾರ ಸಂಕಿರಣ ನಡೆಯಲಿದೆ. ಇದೇ ವೇಳೆ ಕೆ.ವಿ.ಥಾಮಸ್ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ಸ್ ಮುಖಂಡರು ಹೇಳಿದ್ದಾರೆ.
ಕೇಂದ್ರ-ರಾಜ್ಯ ಸಂಬಂಧಗಳ ವಿಷಯದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವಂತೆ ಸಿಪಿಎಂ ಕೆವಿ ಥಾಮಸ್‌ಗೆ ಆಹ್ವಾನ ನೀಡಿದೆ. ಆದರೆ, ಸಿಪಿಎಂ ಸೆಮಿನಾರ್‌ಗೆ ಹಾಜರಾಗದಿರುವಂತೆ ಕಾಂಗ್ರೆಸ್‌ನ ನಿಲುವನ್ನು ಉಲ್ಲಂಘಿಸಿ ಕೆವಿ ಥಾಮಸ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ನಿನ್ನೆ ಅವರು ನಿರ್ಧಾರ ಪ್ರಕಟಿಸಿದ್ದಾರೆ.
ಪಕ್ಷದ ನಿಲುವು ಉಲ್ಲಂಘಿಸಿ ಪಕ್ಷವನ್ನು ಟೀಕಿಸಿದ ಕೆ.ವಿ.ಥಾಮಸ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಶಿಸ್ತು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ವಿಚಾರ ಸಂಕಿರಣಕ್ಕೆ ತೆರಳಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಎಚ್ಚರಿಕೆ ನೀಡಿರುವರು.