ಕಾಸರಗೋಡು : ಅಂತಾರಾಷ್ಟ್ರೀಯ ಖ್ಯಾತಿಪಡೆದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಂiÀiಕ್ಷಗಾನ ಬೊಂಬೆಯಾಟ ಸಂಘದ ಬೊಂಬೆಯಾಟ ಪ್ರದರ್ಶನ ಹೈದರಾಬಾದ್‍ನ ಸಿಸಿಆರ್‍ಟಿ ಆಂಫೀ ಥಿಯೇಟರ್‍ನಲ್ಲಿ ಯಶಸ್ವಿಯಾಗಿ ಜರಗಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಸಿಸಿಆರ್‍ಡಿ ಹೈದರಾಬಾದ್, ತೆಲಂಗಾಣ ಸಂಗೀತ ನಾಟಕ ಅಕಾಡೆಮಿ -ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದಂಗವಾಗಿ "ಆಝಾದ್ ಕೆ ರಂಗ್ - ಪುತುಲ್ ಕೆ ಸಂಗ್" ಪರಿಕಲ್ಪನೆಯಲ್ಲಿ ಬೊಂಬೆಯಾಟ ಉತ್ಸವವನ್ನು ಆಯೋಜಿಸಲಾಗಿತ್ತು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಆಶ್ರಯದಲ್ಲಿ 'ದೇವಿ ಮಹಾತ್ಮೆ' ಪ್ರಸಂಗವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸಲಾಯಿತು. ಸಂಸ್ಥೆಯ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರ ಕೆ. ವಿ. ರಮೇಶ್, ಸಹಸೂತ್ರಧಾರರಾದ ಶ್ರೀವತ್ಸ ಕೆ. ವಿ., ಸುದರ್ಶನ ಕೆ. ವಿ., ಕುಮಾರಸ್ವಾಮಿ, ಭವ್ಯಶ್ರೀ ಬಲ್ಲಾಳ್, ಸ್ವಾತಿ ಕೆ. ವಿ. ಸರಳಿ, ಧನ್ಯಶ್ರೀ ಮಾಯಿಪ್ಪಾಡಿ ಬೊಂಬೆಗಳನ್ನು ಕುಣಿಸಿದರು.
ಇದೇ ಸಂದರ್ಭದಲ್ಲಿ ತೆಲಂಗಾಣ ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿ ವಸುಂಧರಾ ಅವರು ಕೆ. ವಿ. ರಮೇಶ್ ಅವರನ್ನು ಸನ್ಮಾನಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರದೀಪ್ ದುರೇಜಾ ಸಹಿತ ಗಣ್ಯರು ಉಪಸ್ಥಿತರಿದ್ದರು.