ಹೈದರಾಬಾದ್: ಭಾರತ್ ಬಯೋಟೆಕ್ ಕೋವಿಡ್ ಲಸಿಕೆಯನ್ನು ಯಾವುದೇ ವಿಶ್ವಸಂಸ್ಥೆ ಏಜೆನ್ಸಿಗೆ ಪೂರೈಕೆ ಮಾಡಿಲ್ಲ ಹಾಗೂ ಇದರಿಂದ ತನಗೆ ಯಾವುದೇ ರೀತಿಯ ಪರಿಣಾಮ ಉಂಟಾಗಿಲ್ಲ ಎಂದು ಭಾರತ್ ಬಯೋಟೆಕ್ ಸೋಮವಾರ ಹೇಳಿದೆ.
ಹೈದರಾಬಾದ್: ಭಾರತ್ ಬಯೋಟೆಕ್ ಕೋವಿಡ್ ಲಸಿಕೆಯನ್ನು ಯಾವುದೇ ವಿಶ್ವಸಂಸ್ಥೆ ಏಜೆನ್ಸಿಗೆ ಪೂರೈಕೆ ಮಾಡಿಲ್ಲ ಹಾಗೂ ಇದರಿಂದ ತನಗೆ ಯಾವುದೇ ರೀತಿಯ ಪರಿಣಾಮ ಉಂಟಾಗಿಲ್ಲ ಎಂದು ಭಾರತ್ ಬಯೋಟೆಕ್ ಸೋಮವಾರ ಹೇಳಿದೆ.
ಇದುವರೆಗೆ ಕಂಪೆನಿ ಲಸಿಕೆಗಳನ್ನು ಭಾರತೀಯ ಸರಕಾರ ಹಾಗೂ ಕೇಂದ್ರದ ಲಸಿಕಾ ಮೈತ್ರಿ ಕಾರ್ಯಕ್ರಮದ ವ್ಯಾಪ್ತಿಯ 9 ದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಇದುವರೆಗೆ ನಾವು ಯಾವುದೇ ಆದೇಶವನ್ನು ವಿಶ್ವಸಂಸ್ಥೆಯ ಏಜೆನ್ಸಿಯಿಂದ ಸ್ವೀಕರಿಸಿಲ್ಲ ಎಂದು ಮೂಲಗಳು ತಿಳಿಸಿದೆ. ಅಂತಾರಾಷ್ಟ್ರೀಯ ಲಸಿಕಾ ಒಕ್ಕೂಟವಾದ ಗವಿ ಕೊವ್ಯಾಕ್ಸ್ ಕೂಡ ಕೊವ್ಯಾಕ್ಸಿನ್ ಕುರಿತು ಯಾವುದೇ ಆದೇಶ ನೀಡಿಲ್ಲ ಎಂದು ಅದು ಹೇಳಿದೆ. ಉತ್ತಮ ಉತ್ಪಾದನಾ ಅಭ್ಯಾಸ (ಜಿಎಂಪಿ) ಕೊರತೆ ಉಲ್ಲೇಖಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಎಪ್ರಿಲ್ 2ರಂದು ವಿಶ್ವಸಂಸ್ಥೆಯ ಖರೀದಿ ಏಜೆನ್ಸಿಗಳ ಮೂಲಕ ಕೊವ್ಯಾಕ್ಸಿನ್ ಪೂರೈಕೆ ರದ್ದುಗೊಳಿಸುವುದನ್ನು ಎಪ್ರಿಲ್ 2ರಂದು ದೃಢಪಡಿಸಿತ್ತು.
ಅಲ್ಲದೆ, ಲಸಿಕೆ ತೆಗೆದುಕೊಂಡ ದೇಶಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿತ್ತು. ತುರ್ತು ಬಳಕೆಗೆ ನಿಗದಿಪಡಿಸಿದ ಅವಧಿಯ ಅನಂತರ ಪರಿಶೀಲನೆ ಹಾಗೂ ಇತ್ತೀಚೆಗೆ ಗುರುತಿಸಲಾದ ಜಿಎಂಪಿ ಕೊರತೆಗಳನ್ನು ಪರಿಹರಿಸಲು ಪ್ರಕ್ರಿಯೆ ನಡೆಸಲು ಹಾಗೂ ಘಟಕಗಳನ್ನು ಉನ್ನತೀಕರಣಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ಕೊವ್ಯಾಕ್ಸಿನ್ ಅನ್ನು ರದ್ದುಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.