ಕೊಚ್ಚಿ: ಚಿತ್ರನಟ ದಿಲೀಪ್ ಮೇಲೆ ಆರೋಪಿಸಲ್ಪಟ್ಟಿರುವ ಹತ್ಯೆ ಗೂಢಾಲೋಚನೆ ಪ್ರಕರಣದಲ್ಲಿ ಅಪರಾಧ ವಿಭಾಗವು ನಟಿ ಮಂಜು ವಾರಿಯರ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ. ಕೊಚ್ಚಿಯ ಖಾಸಗಿ ಹೋಟೆಲ್ನಲ್ಲಿ ಹೇಳಿಕೆ ಪಡೆಯಲಾಗಿದೆ.
ಎಸ್ಪಿ ಮೋಹನಚಂದ್ರನ್ ನೇತೃತ್ವದ ಅಧಿಕಾರಿಗಳ ತಂಡ ಸಾಕ್ಷಿ ಪಡೆಯಲು ಬಂದಿತ್ತು. ಮಾಧ್ಯಮಗಳ ವರದಿ ಪ್ರಕಾರ ಸುಮಾರು ಮೂರೂವರೆ ಗಂಟೆಗಳ ಕಾಲ ವಿಚಾರಣೆ ನಡೆದಿದೆ.
ನಿರ್ದೇಶಕ ಬಾಲಚಂದ್ರಕುಮಾರ್ ಅವರು ನೀಡಿದ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ ರೆಕಾರ್ಡಿ|ಂಗ್ ಮಾಡಲಾಗಿದೆ. ಪ್ರಶ್ನೆಗಳು ಹೆಚ್ಚಾಗಿ ಪೋನ್ ಸಂದೇಶಗಳ ಮೇಲೆ ಕೇಂದ್ರೀಕೃತವಾಗಿತ್ತು ಎಂದು ವರದಿಯಾಗಿದೆ. ಈ ಹಿಂದೆ ಕೊಚ್ಚಿಯಲ್ಲಿ ನಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಂಜು ವಾರಿಯರ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.
ಪದ್ಮಸರೋವರದ ಮನೆಯಲ್ಲಿಯೇ ಕುಳಿತು ದಿಲೀಪ್ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ತಂಡವನ್ನು ಅಪಾಯಕ್ಕೆ ಸಿಲುಕಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪ್ರಕರಣವನ್ನು ರದ್ದುಗೊಳಿಸುವಂತೆ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೊನ್ನೆ ತಿರಸ್ಕರಿಸಿತ್ತು. ಪ್ರಕರಣದ ಎಫ್ಐಆರ್ ಅನ್ನು ವಜಾಗೊಳಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿತ್ತು.
ಜತೆಗೆ ಹೆಚ್ಚಿನ ತನಿಖೆಗಾಗಿ 40 ದಿನಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ. ಕೊಲೆ ಸಂಚು ಪ್ರಕರಣದಲ್ಲಿ ದಿಲೀಪ್ ಮತ್ತು ಆತನ ಸಹೋದರ ಅನೂಪ್ ಸೇರಿದಂತೆ ಆರು ಮಂದಿ ಆರೋಪಿಗಳಿದ್ದಾರೆ. ಪ್ರಕರಣದಲ್ಲಿ ಕಾವ್ಯಾ ಮಾಧವನ್, ದಿಲೀಪ್ ಪರ ವಕೀಲರು ಮತ್ತು ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ದಿಲೀಪ್ ತನ್ನ ಪೋನ್ನಿಂದ ತೆಗೆದುಹಾಕಿರುವ ವಾಟ್ಸಾಪ್ ಗುಂಪಿನ ಹಲವಾರು ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ಅಪರಾಧ ವಿಭಾಗ ಸಿದ್ಧತೆ ನಡೆಸುತ್ತಿದೆ.
ಪಿತೂರಿ ಪ್ರಕರಣದ ಎಂಟನೇ ಆರೋಪಿ ಸಾಯಿ ಶಂಕರ್ ಅವರನ್ನು ತನಿಖಾ ತಂಡ ಮೊನ್ನೆ ಮತ್ತೊಮ್ಮೆ ವಿಚಾರಣೆ ನಡೆಸಿತ್ತು. ಷಡ್ಯಂತ್ರ ನಡೆದಿರುವುದನ್ನು ನಿರ್ದೇಶಕ ಬಾಲಚಂದ್ರ ಕುಮಾರ್ ಬಹಿರಂಗಪಡಿಸಿದ ನಾಲ್ಕು ವರ್ಷಗಳ ನಂತರ ಪ್ರಕರಣ ದಾಖಲಾಗಿದೆ. ನಿರ್ದೇಶಕರು ತನಿಖಾಧಿಕಾರಿಗಳಿಗೆ ಸಾಕ್ಷ್ಯವನ್ನು ಹಸ್ತಾಂತರಿಸಿದರು.