ಪೆರ್ಲ: ಪೆರ್ಲ ಸನಿಹದ ಅಮೆಕ್ಕಳದಲ್ಲಿನ ಪಳ್ಳಿಕ್ಕರೆ ತರವಾಡು ಶ್ರೀ ಕುಂಟಾರು ಚಾಮುಂಡಿ ದೈವಸ್ಥಾನದಲ್ಲಿ ಶ್ರೀದೈವಗಳ ನೇಮ ಮೇ 10 ಹಾಗೂ 11ರಂದು ಜರುಗಲಿದೆ. 10ರಂದು ಬೆಳಗ್ಗೆ 8.30ಕ್ಕೆ ಗಣಪತಿ ಹವನ, ಶ್ರೀ ವೆಂಕಟ್ರಮಣ ಸೇವೆ, ಸಂಜೆ 6ಕ್ಕೆ ಭಜನೆ, 7ಕ್ಕೆ ಶ್ರೀದೈವದ ಭಂಡಾರ ಇಳಿಯುವುದು, ಶ್ರೀ ಗುರುದೈವದ ಕೋಲ, ಶ್ರೀ ಮೂಕಾಂಬಿಕಾ ಗುಳಿಗ ಕೋಲ, ಕಲ್ಲುರ್ಟಿ ದೈವದ ಕೋಲ ನಡೆಯುವುದು. 11ರಂದು ಸಂಜೆ 6ಕ್ಕೆ ಭಜನೆ, 7ಕ್ಕೆ ಶ್ರೀದೈವದ ತೊಡಙಲ್, ಮೋಂದಿ ಕೋಲ, ಕಲ್ಕುಡ-ಕಲ್ಲುರ್ಟಿ ದೈವದ ಕೋಲ, ಧರ್ಮದೈವ ಶ್ರೀ ಕುಂಟಾರು ಚಾಮುಂಡಿ ದೈವದ ಕೋಲ ನಡೆಯುವುದು.